ನವದೆಹಲಿ: ಸ್ವಚ್ಛಭಾರತ ಅಭಿಯಾನ ಸಾಮಾನ್ಯ ಜನರಲ್ಲ್ಲೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದೆ. ಸರ್ಕಾರಿ ಕಛೇರಿಗಳಲ್ಲಿ, ಕಟ್ಟಡಗಳಲ್ಲಿ, ರಸ್ತೆಗಳ ಅಕ್ಕಪಕ್ಕಗಳಲ್ಲಿ ಹೀಗೆ ಎಲ್ಲಾ ಕಡೆಯೂ ಸ್ವಚ್ಛತೆಯ ಘೋಷಣೆಗಳನ್ನು, ಸ್ವಚ್ಛ ಭಾರತದ ಲೋಗೋಗಳನ್ನು ಜನರು, ಸಂಸ್ಥೆಗಳು ಸ್ವರ್ಯಪ್ರೇರಿತವಾಗಿ ಹಾಕುತ್ತಿವೆ. ಸಾರ್ವಜನಿಕರು ಇದನ್ನು ನೋಡಿ ಸ್ವಚ್ಛತೆ ಕಲಿಯಲಿ ಎಂಬ ಆಶಯ ಇದರ ಹಿಂದಿದೆ.
ಆದರೆ ಇಲ್ಲೊಬ್ಬರು ವಿಶೇಷ ಎಂಬಂತೆ ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲೇ ಸ್ವಚ್ಛ ಭಾರತದ ಲೋಗೋವನ್ನು ಮುದ್ರಿಸಿ ಎಲ್ಲರಿಗೂ ಹಂಚಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ ಅಭಿಮಾನಿ ಆಕಾಶ್ ಜೈನ್ ಎಂಬ ಉದ್ಯೋಗಿ ತಮ್ಮ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲೇ ಸ್ವಚ್ಛಭಾರತದ ಲೋಗೋ ಹಾಕಿದ್ದಾರೆ. ಮಾತ್ರವಲ್ಲ ಆ ಆಮಂತ್ರಣ ಪತ್ರಿಕೆಯ ಫೋಟೋ ಸಮೇತ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವಿಟ್ ಮಾಡಿದ್ದಾರೆ. ಮೋದಿ ಇದಕ್ಕೆ ರಿಟ್ವಿಟ್ ಮಾಡಿ ಜೈನ್ ಅವರನ್ನು ಫಾಲೋ ಕೂಡ ಮಾಡಿದ್ದಾರೆ.
ನಾನು ಮೋದಿಯವರ ಸ್ವಚ್ಛ ಭಾರತ ಅಭಿಯಾನದಿಂದ ತುಂಬಾ ಪ್ರೇರಿತನಾಗಿದ್ದೇನೆ, ನನ್ನ ತಂದೆ ಈ ಅಭಿಯಾನದ ಲೋಗೋ ಮತ್ತು ಸಂದೇಶ ನನ್ನ ತಂಗಿಯ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಇರಬೇಕು ಎಂದು ಬಯಸಿದ್ದರು, ಅದಕ್ಕಾಗಿ ನಾನು ಅದನ್ನು ಪ್ರಿಂಟ್ ಮಾಡಿದೆ ಎಂದು ಆಕಾಶ್ ಹೇಳಿದ್ದಾರೆ.
ಈ ಹಿಂದೆಯೂ ಮರಿಸ್ವಾಮಿ ಎಂಬುವವರು ತಮ್ಮ ಮದುವೆ ಕಾರ್ಡ್ನ ಜೊತೆ ೪ ಪುಟಗಳಲ್ಲಿ ಶೌಚಾಲಯದ ಮಹತ್ವವನ್ನು ಸಾರುವ ಪತ್ರವನ್ನು ಪ್ರಿಂಟ್ ಮಾಡಿ ಹಂಚಿದ್ದರು.
ಸಾಮಾನ್ಯ ಜನರೂ ಕೂಡ ಸ್ವಚ್ಛತಾ ಅಭಿಯಾನದಿಂದ ಯಾವ ರೀತಿ ಪ್ರೇರಿತಗೊಂಡಿದ್ದಾರೆ ಎಂಬುದು ಇದರಿಂದ ತಿಳಿದು ಬರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.