ನವದೆಹಲಿ: ರಾಷ್ಟ್ರಪತಿ ಭವನವು ಎಪ್ರಿಲ್ 5ರಂದು ’ಸಮಗ್ರ ಬೆಳವಣಿಗೆಗಾಗಿ ಸ್ಮಾರ್ಟ್ ಗ್ರಾಮಗಳಲ್ಲಿನ ತಳಮಟ್ಟದ ಉದ್ಯಮಿಗಳಿಗೆ ಮಾರ್ಗದರ್ಶನ’ ಎಂಬ ವಿಷಯದ ಮೇಲೆ ಶೃಂಗಸಭೆಯನ್ನು ಹಮ್ಮಿಕೊಳ್ಳಲಿದೆ.
ಭಾರತೀಯ ಯುವ ಶಕ್ತಿ ಟ್ರಸ್ಟ್ ತನ್ನ ರಜತ ಮಹೋತ್ಸವದ ಅಂಗವಾಗಿ ಈ ಶೃಂಗಸಭೆಯನ್ನು ಆಯೋಜನೆ ಮಾಡುತ್ತಿದೆ. ದೇಶದ ಉದ್ಯೋಗೀಕರಣದ ಯೋಜನೆಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಉದ್ಯಮಗಳನ್ನು ಕೈಗೆತ್ತಿಕೊಳ್ಳುವಂತೆ ಯುವಜನತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಶೃಂಗಸಭೆಯನ್ನು ಆಯೋಜನೆ ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೈಗಾರಿಕಾ ದಿಗ್ಗಜರು, ವಿವಿಧ ವಲಯಗಳ ಮಾರ್ಗದರ್ಶಕರು, ಭಾರತೀಯ ಸೇವಾ ಶಕ್ತಿ ಟ್ರಸ್ಟ್ನ ಉದ್ಯಮಿಗಳು ಒಟ್ಟು ಸೇರಿ ಸ್ಥಿರ ಉದ್ಯೋಗೀಕರಣದ ಬಗ್ಗೆ ತಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ.
ಒಂದು ದಿನವಿಡಿ ನಡೆಯುವ ಈ ಶೃಂಗಸಭೆಯಲ್ಲಿ ಒಟ್ಟು ಆರು ಸೆಷನ್ಗಳು ಇರಲಿದೆ. ರಾಷ್ಟ್ರಪತಿ ಪರಣವ್ ಮುಖರ್ಜಿ, ಸಚಿವರಾದ ವೆಂಕಯ್ಯ ನಾಯ್ಡು, ಸುರೇಶ್ ಪ್ರಭು, ರಾಜೀವ್ ಪ್ರತಾಪ್ ರೂಢಿ ಸೆಷನ್ ಉದ್ದೇಶಿಸಿ ಮಾತನಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.