ನವದೆಹಲಿ: ನೀವು ವಾರ್ಷಿಕ 6ರಿಂದ 18 ಲಕ್ಷ ವೇತನ ಪಡೆಯುತ್ತಿರುವ ಮಧ್ಯಮ ಆದಾಯ ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಕ್ರೆಡಿಟ್ ಆಧಾರಿತ ಬಡ್ಡಿದೆ ಸಬ್ಸಿಡಿ ಯೋಜನೆಯಡಿ ಗೃಹ ಸಾಲದ ಮೇಲೆ ಸಬ್ಸಿಡಿ ಪಡೆಯಬಹುದಾಗಿದೆ.
ಈಗಾಗಲೇ ಸಾಲ ಮಂಜೂರು ಮಾಡಲಾದ ವ್ಯಕ್ತಿಗಳು ಅಥವಾ ಜನವರಿ ೧, 2017ರ ಯೋಜನೆ ಪ್ರಕ್ರಿಯೆಯಡಿ ಸಾಲಕ್ಕೆ ಅರ್ಜಿ ಸಲ್ಲಿಸಿದವರು ಈ ಯೋಜನೆಯಡಿ ಸಾಲ ಪಡೆಯಲಿದ್ದಾರೆ.
ಕಳೆದ ಡಿಸೆಂಬರ್ 31, 2016ರಂದು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಮ ಆದಾಯ ವರ್ಗ (ಎಂಐಜಿ)ದವರಿಗೆ ಕ್ರೆಡಿಟ್ ಆಧಾರಿತ ಸಬ್ಸಿಡಿ ಯೋಜನೆ (ಸಿಎಲ್ಎಸ್ಎಸ್) ಯೋಜನೆಯನ್ನು ಘೋಷಿಸಿದ್ದು, ಮಾರ್ಚ್ 2017ರಲ್ಲಿ ವಸತಿ ಮತ್ತು ಬಡತನ ನಿರ್ಮೂಲನೆ ಸಚಿವ ವೆಂಕಯ್ಯ ನಾಯ್ಡು ಅವರು ಈ ಯೋಜನೆಯ ಮಾರ್ಗಸೂಚಿ ವಿವರಗಳನ್ನು ಬಿಡುಗಡೆ ಮಾಡಿದ್ದರು.
ಈ ಯೋಜನೆಯಡಿ 6-18 ಲಕ್ಷ ಆದಾಯ ಹೊಂದಿದ ಮಧ್ಯಮ ಆದಾಯ ವರ್ಗದವರು ಮತ್ತು ಜನವರಿ 2017ರಿಂದ ಈ ಯೋಜನೆಯಡಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದವರು ಸಾಲದ ಬಡ್ಡಿದರದಲ್ಲಿ ಸಬ್ಸಿಡಿ ಪಡೆಯಲಿದ್ದಾರೆ.
ಮಧ್ಯಮ ವರ್ಗದ ಸಿಎಲ್ಎಸ್ ಯೋಜನೆಯಡಿ ವಾರ್ಷಿಕ 6-12 ಲಕ್ಷ ಆದಾಯದವರನ್ನು (ಎಂಐಜಿ-1) ಹಾಗೂ 12-18 ಲಕ್ಷ ಆದಾಯ ಹೊಂದಿದವರನ್ನು (ಎಂಐಜಿ-2)ಆದಾಯ ವಿಭಾಗವಾಗಿ ವಿಗಡಿಸಲಾಗಿದೆ. ಎಂಐಜಿ-1 ವಿಭಾಗದ ಅಡಿಯಲ್ಲಿ 9 ಲಕ್ಷದ ವರೆಗಿನ ಗೃಹ ಸಾಲದ ಮೇಲೆ ಶೇ.4ರಷ್ಟು ಸಬ್ಸಿಡಿ ನೀಡಲಾಗುವುದು. ಎಂಐಜಿ-೨ ಅಡಿಯಲ್ಲಿ 12 ಲಕ್ಷದ ವರೆಗಿನ ಸಾಲದ ಮೇಲೆ ಶೇ.3 ಸಬ್ಸಿಡಿ ನೀಡಲಾಗುವುದು.
20 ವರ್ಷದ ಗರಿಷ್ಟ ಸಾಲದ ಅವಧಿಯಲ್ಲಿ ಸಾಲದ ಬಡ್ಡಿ ದರವನ್ನು ಶೇ.9 ಎನ್ಪಿವಿ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ.
ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗದವರು (ಇಡಬ್ಲ್ಯೂಎಸ್) ಮತ್ತು ಕಡಿಮೆ ಆದಾಯದ ವರ್ಗ (ಎಲ್ಐಜಿ) ವಿಭಾಗದಡಿ ಗೃಹ ಸಾಲ ಪಡೆಯುವವರು 20 ವರ್ಷದ ಅವಧಿಗೆ 6.5 ಸಬ್ಸಿಡಿ ನೀಡಲಾಗುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.