ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಡಿಯಲ್ಲಿ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಜಾಮೀನುರಹಿತ ಅಪರಾಧವಾಗಿದ್ದು, ಪೊಲೀಸರು ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಹೊಂದಿದೆ.
ಕೇಂದ್ರ ಜಿಎಸ್ಟಿ ಕಾಯಿದೆ ಪ್ರಕಾರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ ಅಥವಾ ತೆರಿಗೆ ಬಾಕಿಯನ್ನು ತಪ್ಪಾಗಿ ದಾಖಲಿಸಿದಲ್ಲಿ ಅಥವಾ ತಪ್ಪಾಗಿ ತೆಗೆದುಕೊಂಡ ಮರುಪಾವತಿ ಹಣ 5 ಕೋಟಿ ಮೀರಿದಲ್ಲಿ ಜಾಮೀನು ರಹಿತ ಎಂದು ಪರಿಗಣಿಸಲಾಗುವುದು.
ಕೇಂದ್ರ ಸರ್ಕಾರ ಜುಲೈ 1ರಂದು ಜಿಎಸ್ಟಿ ಜಾರಿಗೊಳಿಸುವ ಗುರಿ ಹೊಂದಿದ್ದು, ಇದು ಕೇಂದ್ರ ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಇತರ ಸ್ಥಳೀಯ ಸುಂಕವನ್ನು ಒಳಗೊಂಡಿದೆ.
ಓರ್ವ ವ್ಯಕ್ತಿಯನ್ನು ವೇದ್ಯ ಅಪರಧದ ಅಡಿಯಲ್ಲಿ ಬಂಧಿಸಿದಲ್ಲಿ, ಆತನಿಗೆ ಬರಹ ರೂಪದಲ್ಲಿ ಮಾಹಿತಿ ನೀಡಬೇಕಿದ್ದು, ಬಂಧಿಸಿದ 24 ಗಂಟೆ ಒಳಗೆ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಬೇಕಿದೆ.
ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ಕಾಯಿದೆ ಅಡಿಯಲ್ಲಿ ಇತರ ಅಪರಾಧಗಳು ವೇದ್ಯ ರಹಿತವಾಗಿದ್ದು, ಜಾಮೀನು ನೀಡಲಾಗುವುದು ಎಂದು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.