ನವದೆಹಲಿ: ಆದಾಯ ತೆರಿಗೆ ಮರುಪಾವತಿಗೆ ಹೊಸ ಒಂದು ಪುಟದ ಫಾರಂನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಎಪ್ರಿಲ್ 1ರಿಂದ ಹೊಸ ಫಾರ್ಮ್ ಬಳಸಿ ಆದಾಯ ತೆರಿಗೆ ಇ-ಫೈಲಿಂಗ್ ಮಾಡುವ ಅವಕಾಶವಿದ್ದು, ಇದಕ್ಕೆ ಆಧಾರ್ ಸಂಖ್ಯೆ ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2 ಲಕ್ಷಕ್ಕಿಂತ ಹೆಚ್ಚು ಬ್ಯಾಂಕ್ ಠೇವಣಿ ಇದ್ದಲ್ಲಿ ಅದನ್ನು ಬಹಿರಂಗಪಡಿಸುವಂತೆ ಸರ್ಕಾರ ಆದೇಶಿಸಿದೆ.
ಆದಾಯ ತೆರಿಗೆ ಮರುಪಾವತಿ ಫಾರ್ಮ್-೧ (ಸಹಜ್), ಆದಾಯ ಹಕ್ಕುಗಳ ತೆರಿಗೆ ಕಡಿತ ಸೇರಿದಂತೆ ವಿವಿಧ ಕಾಲಂಗಳಿರುವ ೭ ಪುಟಗಳ ಫಾರ್ಮ್ನ್ನು ಬದಲಾಯಿಸಲಿದೆ. 50 ಲಕ್ಷ ರೂ. ವರೆಗೆ ಸಂಬಳ, ಗೃಹ ಆಸ್ತಿ, ಬಡ್ಡಿ ಹೊಂದಿರುವ ವ್ಯಕ್ತಿಗಳು ಸಹಜ್ ಸಲ್ಲಿಸಬಹುದು.
ಪ್ರಸ್ತುತ ಸಹಜ್ (ಐಟಿಆರ್-1)ನ್ನು ವೇತನ ಪಡೆಯುವ ನೌಕರರು ಮತ್ತು ಐಟಿಆರ್-2ನ್ನು ವ್ಯಾಪಾರದ ಆದಾಯ ಹೊಂದಿಲ್ಲದ ಎಚ್ಯುಎಫ್ಗಳು ಮತ್ತು ಜನಸಾಮಾನ್ಯರು ಸಲ್ಲಿಸುತ್ತಿದ್ದಾರೆ. ಸರ್ಕಾರ ಈಟಿಆರ್-೨ಎ (ವ್ಯಾಪಾರ ಅಥವಾ ವೃತ್ತಿಯಿಂದ ಆದಾಯ ಪಡೆಯದ ಅಥವಾ ಬಂಡವಾಳದ ಲಾಭ ಮತ್ತು ವಿದೇಶಿ ಸ್ವತ್ತುಗಳನ್ನು ಹೊಂದಿಲ್ಲದ ವ್ಯಕ್ತಿಗಳು ಹಾಗೂ ಎಚ್ಯುಎಫ್ಗಳು ಬಳಸುವ ಫಾರ್ಮ್) ಫಾರ್ಮ್ನ್ನು ತೆಗೆದು ಹಾಕಿದೆ.
ಐಟಿಆರ್ ಫಾರ್ಮ್-1 ಇ-ಫೈಲಿಂಗ್ ಎಪಿಲ್ 1ರಿಂದ ಕಾರ್ಯರೂಪಕ್ಕೆ ಬಂದಿದ್ದು, ಆದಾಯ ತೆರಿಗೆ ಸಲ್ಲಿಸಲು ನೀಡಲಾಗಿರುವ ಜುಲೈ 31ರ ಗಡುವಿನ ತನಕ ಸಲ್ಲಿಸಬಹುದು. ಹಳೆಯ ಐಟಿಆರ್ ಫಾರ್ಮ್ ಕೂಡ ಆಧಾರ್ ಸಂಖ್ಯೆಯನ್ನು ಉಲ್ಲೇಖಿಸುವ ಕಾಲಂ ಹೊಂದಿದ್ದರೂ ಆದಾಯ ತೆರಿಗೆ ಕಾಯಿದೆ ತಿದ್ದುಪಡಿ ಮೂಲಕ ಕೇಂದ್ರ ಸರ್ಕಾರ ಇದನ್ನು ಕಡ್ಡಾಯಗೊಳಿಸಿದೆ.
ಕೇಂದ್ರ ನೇರ ತೆರಿಗೆ ಮಂಡಳಿ ೨೦೧೭-೧೮ನೇ ಸಾಲಿನ ಆದಾಯ ತೆರಿಗೆ ಮರುಪಾವತಿ ಫಾರ್ಮ್ನ್ನು ಸರಳಗೊಳಿಸಿದ್ದು, ಇದರಲ್ಲಿ ತೆರಿಗೆ ಗಣನೆ ಮತ್ತು ತೆರಿಗೆ ಕಡಿತ ಮುಂತಾದ ಭಾಗಗಳನ್ನು ಸರಳಗೊಳಿಸಿದೆ. ಆದಾಯ ತೆರಿಗೆ ಪಾವತಿದಾರು ತಮ್ಮ ವೈಯಕ್ತಿಕ ದಾಖಲೆ, ವೇತನ ಅಥವಾ ಪಿಂಚಣಿ ಮೂಲಕ ಪಡೆಯುವ ಆದಾಯ, ಗೃಹ ಆಸ್ತಿ, ಬಡ್ಡಿ ದರ ಮೊದಲಾದ ಆಸ್ತಿಗಳನ್ನು ಬಹಿರಂಗಪಡಿಸಬೇಕು. ಅನಂತರ ನಿರ್ಣಯ ಹಕ್ಕು ತೆರಿಗೆ ಲೆಕ್ಕಾಚಾರವನ್ನು ಸಲ್ಲಿಸಬೇಕು.
ತೆರಿಗೆ ಪಾವತಿ ಫಾರ್ಮ್ ಸಲ್ಲಿಸುವ ಸಂದರ್ಭ ತೆರಿಗೆದಾರರು ಪಾನ್ ಕಾರ್ಡ್ ಮತ್ತು ಆಧಾರ್ ಸಂಖ್ಯೆ, ವೈಯಕ್ತಿಕ ಮಾಹಿತಿ, ತೆರಿಗೆ ಪಾವತಿ ದಾಖಲೆಗಳನ್ನು ಸಲ್ಲಿಸಬೇಕು. ಫಾರ್ಮ್ನಲ್ಲಿ ಟಿಡಿಎಸ್ ಆಟೋ ಫೈಲ್ ಆಗಲಿದೆ ಎಂದು ಕೇಂದ್ರ ತೆರಿಗೆ ಇಲಾಖೆ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.