ನವದೆಹಲಿ: ವಿಡಿಯೊ ಗೇಮ್ವೊಂದನ್ನು ಬರೋಬ್ಬರಿ 40 ಲಕ್ಷಕ್ಕಿಂತಲೂ ಹೆಚ್ಚು ಜನ ಡೌನ್ಲೋಡ್ ಮಾಡಿದ್ದಾರೆ. ಅದರಲ್ಲಿ ಅಂದಾಜು 25 ಲಕ್ಷ ಡೌನ್ಲೋಡ್ಗಳು ಬಾಂಗ್ಲಾದಿಂದಾಚೆಗೆ ಆಗಿವೆಯಂತೆ.
ಈ ಕುರಿತು ಬಾಂಗ್ಲಾದ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದ್ದು, ಬಾಂಗ್ಲಾ ದೇಶೀಯನೊಬ್ಬ ಪಾಕಿಸ್ತಾನೀಯನನ್ನು ’ಹೀರೋಸ್ ಆಫ್ 71’ ಎಂಬ ಗೇಮ್ನಲ್ಲಿ ಕೊಲ್ಲುತ್ತಾನೆ. ಇದರ ಪರಿಣಾಮವೇ ಈ ಗೇಮ್ ಸಾಮಾಜಿಕ ಜಾಲತಾಣದಲ್ಲೆಲ್ಲ ವೈರಲ್ ಆಗಿದೆಯಂತೆ.
1971 ರ ಯುದ್ಧದಲ್ಲಿ ಬಾಂಗ್ಲಾ ದೇಶದ ಲಕ್ಷಾಂತರ ಜನ ಪ್ರಾಣತೆತ್ತಿದ್ದಾರೆಂದು ಬಾಂಗ್ಲಾ ಈಗಲೂ ಹೇಳುತ್ತಿದೆ. ಅದರ ಕುರುಹಾಗಿ ಈ ಗೇಮ್ ಅಭಿವೃದ್ಧಿಪಡಿಸಿದ್ದು ಹೆಚ್ಚು ಪ್ರಸಾರ ಪಡೆಯುತ್ತಿದೆ.
ಪೋರ್ಟ್ಬ್ಲಿಸ್ ಎಂಬ ಕಂಪೆನಿಯು ಈ ಗೇಮ್ ಅನ್ನು ಅಭಿವೃದ್ಧಿಪಡಿಸಿದ್ದು, 1971 ರ ಯುದ್ಧವನ್ನು ನೆನಪಿಸುವುದೇ ಇದರ ಮೂಲ ಉದ್ದೇಶವಂತೆ. ಇದೊಂದು ಗೇಮ್ ಎನಿಸಿದರೂ, ಭಾವನಾತ್ಮಕವಾಗಿ ಬಾಂಗ್ಲಾ ಹಾಗೂ ಪಾಕಿಸ್ಥಾನದ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.