ರತ್ಲಂ: ಭಾರತ ಮುಂದುವರೆಯುತ್ತಿದ್ದರು ಜಾತಿ ಎಂಬ ಪಿಡುಗು ಮಾತ್ರ ಇನ್ನೂ ಜನರಲ್ಲಿ ಹಾಗೆಯೇ ಉಳಿದುಕೊಂಡಿದೆ. ಕುದುರೆಯ ಮೇಲೆ ಕೂತು ಮೆರವಣಿಗೆ ಹೊರಟ ದಲಿತ ವರ್ಗಕ್ಕೆ ಸೇರಿದ ಮದುಮಗನ ಮೇಲೆ ಮೇಲ್ಜಾತಿಯ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ.
ಆತ ದಲಿತನಾದ ಕಾರಣ ಕುದುರೆಯ ಮೇಲೆ ಕುಳಿತುಕೊಳ್ಳಬಾರದು ಎಂದು ಮೇಲ್ಜಾತಿಯವರು ಧಮ್ಕಿ ಹಾಕಿದ್ದರು, ಆದರೆ ಇದನ್ನು ಲೆಕ್ಕಿಸದೆ ಆತ ಹೆಲ್ಮೆಟ್ ಧರಿಸಿ ಮದುವೆಯ ದಿನ ಕುದುರೆಯಲ್ಲಿ ಮೆರವಣಿಗೆ ಬಂದಿದ್ದಾನೆ.
ಇದನ್ನು ಸಹಿಸದ ಕೆಲ ಧುರುಳರು ಆತನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹೆಲ್ಮೆಟ್ ಧರಿಸಿದ್ದರಿಂದ ಆತನಿಗೆ ಏನೂ ಆಗಲಿಲ್ಲ. ಬಳಿಕ ಪೊಲೀಸರು ಬಂದು ಆತನಿಗೆ ಸಂಪೂರ್ಣ ರಕ್ಷಣೆ ನೀಡಿದರು.
ಮೇಲ್ಜಾತಿಯವರ ಧಮ್ಕಿಗೆ ಬಗ್ಗದ ಆ ಮದುಮಗನ ಸಾಹಸಕ್ಕೆ ಶಹಬ್ಬಾಸ್ ಎನ್ನಲೇ ಬೇಕು. ಹಾಗೆಯೇ ಜಾತಿಯ ಪಿಡಿಗು ಇನ್ನೂ ಇದೆಯಲ್ಲ ಎಂಬುದಕ್ಕೆ ನಾಚಿಕೆಪಟ್ಟುಕೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.