ನವದೆಹಲಿ: ನೆರೆಯ ಪಾಕಿಸ್ಥಾನ ಪ್ರಾಯೋಜಿಸುತ್ತಿರುವ ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲ ಇಡೀ ಮನುಕುಲಕ್ಕೆಯೇ ಅಪಾಯಕಾರಿ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ರಷ್ಯಾದಿಂದ ಆಗಮಿಸಿದ ಅಲ್ಲಿನ ಫೆಡರಲ್ ಸೆಕ್ಯೂರಿಟಿ ಸರ್ವಿಸ್ ಡೈರೆಕ್ಟರ್ ಅಲೆಗ್ಸಾಂಡರ್ ಬೊರ್ಟ್ನಿಕೋವ್ ಅವರ ನೇತೃತ್ವ ನಿಯೋಗವನ್ನು ಸ್ವಾಗತಿಸಿದ ಬಳಿಕ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ರಷ್ಯಾ ಉತ್ತಮ ಸ್ನೇಹಿತರು, ಕುಟುಂಬದಂತಹ ಸ್ನೇಹ ಸಂಬಂಧವನ್ನು ಇಟ್ಟುಕೊಂಡಿವೆ ಎಂದ ಅವರು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತೀಯರಿಗೆ ಪ್ರೀತಿಪಾತ್ರರು ಮತ್ತು ಗೌರವಾನ್ವಿತರು ಎಂದಿದ್ದಾರೆ.
‘ಪಾಕ್ ಪ್ರಾಯೋಜಿಸುತ್ತಿರುವ ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಸಮುದಾಯ, ಮನುಕುಲ್ಲೆ ಅಪಾಯಕಾರಿ. ಭಾರತ ಭಯೋತ್ಪಾದನೆಯ ಬಗ್ಗೆ ಶೂನ್ಯ ತಾಳ್ಮೆವಹಿಸಿದೆ’ ಎಂದಿದ್ದಾರೆ.
ಸಿಂಗ್ ಮತ್ತು ರಷ್ಯಾ ನಿಯೋಗದ ನಡುವೆ ೪೫ ನಿಮಿಷಗಳ ಕಾಲ ದ್ವಿಪಕ್ಷೀಯ ಮಾತುಕತೆ ನಡೆದಿದ್ದು, ಎರಡು ದೇಶಗಳ ನಡುವಣ ಇಂಟರ್-ಏಜೆನ್ಸಿ ಸಹಕಾರ ದ್ವಿಪಕ್ಷೀಯ, ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಷಯಗಳತ್ತವೂ ಇರಬೇಕು ಎಂದು ಉಭಯ ದೇಶಗಳು ಈ ವೇಳೆ ಅಭಿಪ್ರಾಯಪಟ್ಟಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.