ಬೆಂಗಳೂರು : ರಾಷ್ಟ್ರೋತ್ಥಾನ ಸಾಹಿತ್ಯದ ಎರಡು ಪುಸ್ತಕಗಳ ಲೋಕಾರ್ಪಣ ಸಮಾರಂಭವು ಮಾರ್ಚ್ 26 ರ ಭಾನುವಾರದಂದು ಬೆಳಗ್ಗೆ 10.30 ಕ್ಕೆ ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆಯಲಿದೆ.
ತುಮಕೂರಿನ ಶ್ರೀರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ವೀರೇಶಾನಂದಜೀ ಮಹಾರಾಜ್ ಅವರು ದಿವ್ಯ ಸಾನ್ನಿಧ್ಯ ವಹಿಸಿ ‘ರಾಷ್ಟ್ರಚಿಂತನ ತರಂಗಗಳು’ ಮತ್ತು ‘ಸಂನ್ಯಾಸಿ ಆಂದೋಲನ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಖ್ಯಾತ ವೇದ ವಿದ್ವಾಂಸರಾದ ಡಾ|| ಜಯಂತಿ ಮನೋಹರ್ ಅವರು ಪುಸ್ತಕಗಳ ಪರಿಚಯ ಮಾಡಲಿದ್ದಾರೆ. ಡಾ|| ನವರತ್ನ ಎಸ್. ರಾಜಾರಾಂ ಹಾಗೂ ಶ್ರೀ ಬಿ. ಪಿ. ಪ್ರೇಮಕುಮಾರ್ ಅವರು ಉಪಸ್ಥಿತರಿರಲಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸಾಹಿತ್ಯ ಪ್ರಕಟಣೆ ಸಂಸ್ಥೆಯಾದ ರಾಷ್ಟ್ರೋತ್ಥಾನ ಸಾಹಿತ್ಯವು 1965 ರಲ್ಲಿ ಪ್ರಾರಂಭಗೊಂಡಿದ್ದು, ಈವರೆಗೆ 131 ಪುಸ್ತಕಗಳನ್ನು ಪ್ರಕಟಿಸಿದೆ. ಈಗ ಲೋಕಾರ್ಪಣೆಗೊಳ್ಳುತ್ತಿರುವುದು 132 ಮತ್ತು 133 ನೇ ಪ್ರಕಟಣೆಯಾಗಿದೆ. ಅನೇಕ ಧೀಮಂತ ವ್ಯಕ್ತಿಗಳ ಜೀವನ ಚರಿತ್ರೆ, ವ್ಯಕ್ತಿತ್ವ ವಿಕಸನ, ಯೋಗ, ಇತಿಹಾಸ, ಆರ್ಥಿಕತೆ, ಸ್ವದೇಶಿ – ಹೀಗೆ ಅನೇಕ ಅಜ್ಞಾತ ಅಪರಿಚಿತ ಹಲವು ವಿಷಯಗಳಿಗೆ ಸಂಬಂಧಿಸಿದ ಸಾಹಿತ್ಯ ಕೃತಿಗಳನ್ನು ರಾಷ್ಟ್ರೋತ್ಥಾನ ಸಾಹಿತ್ಯದ ಮೂಲಕ ಹೊರತರಲಾಗಿದೆ.
ಮುಂಗಡವಾಗಿ ಖರೀದಿಸಿ – ನಿಮ್ಮ ಮನೆ ಬಾಗಿಲಿಗೆ ತಲಪಲಿವೆ.
https://goo.gl/forms/olmrLMd2aUlP4c7Z2 ನಲ್ಲಿ ಇಂದೇ ನೋಂದಾಯಿಸಿಕೊಳ್ಳಿ…
10% ರಿಯಾಯಿತಿ ಮತ್ತು ಉಚಿತ ಡಿegisಣeಡಿeಜ ಠಿosಣ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿರುವ ನಿಮ್ಮ ಮನೆಗೆ ತಲಪಿಸಲಾಗುವುದು.
ರಿಯಾಯಿತಿ ದರಗಳು
1. ಸಂನ್ಯಾಸಿ ಆಂದೋಲನ – ಬೆಲೆ : 250/- ರಿಯಾಯಿತಿ ದರ : 225/- (1 ಪುಸ್ತಕಕ್ಕೆ)
2. ರಾಷ್ಟ್ರಚಿಂತನ ತರಂಗಗಳು – ಬೆಲೆ: 200/- ರಿಯಾಯಿತಿ ದರ : 180/- (1 ಪುಸ್ತಕಕ್ಕೆ)
ಎರಡೂ ಪುಸ್ತಕಗಳಿಗೆ (ಸೆಟ್) ಒಟ್ಟು ಬೆಲೆ : 450/- ರಿಯಾಯಿತಿ ದರ : 375/-
ನಿಮ್ಮ ಮನೆಗೆ ತಲಪಿಸಲಾಗುವುದು. (ಪ್ರತಿಗಳ ಸಂಖ್ಯೆಗೆ ಮಿತಿಯಿಲ್ಲ)
ನೀವು ಮಾಡಬೇಕಾಗಿರುವುದಿಷ್ಟು
1. ರಾಷ್ಟ್ರೋತ್ಥಾನ ಸಾಹಿತ್ಯದ ಈ ಕೆಳಗಿನ ಬ್ಯಾಂಕ್ ಖಾತೆಗೆ NEFT ಮೂಲಕ ಹಣ ಪಾವತಿಸಿ (ಈ ಮೇಲೆ ನಮೂದಿಸಲಾಗಿರುವ ರಿಯಾಯಿತಿ ದರದಂತೆ)
Account Name: Rashtrotthana sahitya
Bank Name: Corporation Bank
Branch Name : Basavanagudi
A/C NO. : 520101000387459
IFSC Code : CORP0000069
2. ಹಣ ಪಾವತಿಸಿದ ನಂತರ https://goo.gl/forms/olmrLMd2aUlP4c7Z2 ನಲ್ಲಿ ನಿಮ್ಮ ಸಂಪೂರ್ಣ ಮಾಹಿತಿ ಭರ್ತಿ ಮಾಡಿ. ಹಣ ಕಳುಹಿಸಿರುವ ವಿವರಗಳನ್ನು (UTR ಮಾಹಿತಿ) ಕಡ್ಡಾಯವಾಗಿ ನಮೂದಿಸಿ.
ಕೊನೆಯ ದಿನಾಂಕ ಮಾರ್ಚ್ 31.
ಸಂಪರ್ಕಿಸಿ: 9945036300 (ಎಲ್.ಎನ್. ಭಟ್)
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.