ಲಕ್ನೋ: ಅಧಿಕಾರಕ್ಕೇರಿದ ಕೇವಲ 75 ಗಂಟೆಗಳಲ್ಲಿ ಹತ್ತು ಹಲವು ಕಠಿಣ ನಿಲುವುಗಳನ್ನು ತಳೆಯುವ ಮೂಲಕ ಸಿಎಂ ಯೋಗಿ ಆದಿತ್ಯನಾಥ ಉತ್ತರಪ್ರದೇಶದ ಜನರಲ್ಲಿ ಹೊಸ ಆಶಾ ಕಿರಣ ಮೂಡಿಸಿದ್ದಾರೆ. ಅವರು ಅಧಿಕಾರಕ್ಕೇರಿದ ಬಳಿಕ ಶಾಲಾ-ಕಾಲೇಜುಗಳಿಂದ ಹಿಡಿದು ರಸ್ತೆಗಳವರೆಗೂ ಯುಪಿಯ ಚಿತ್ರಣವೇ ಬದಲಾಗಿದೆ.
ರೋಮಿಯೋ ನಿಗ್ರಹ ಪಡೆಗೆ ಚಾಲನೆ ನೀಡುವ ಮೂಲಕ ಅವರು ರೋಡ್ ಸೈಡ್ ರೋಮಿಯೋಗಳ ಉಪಟಳದಿಂದ ಮಹಿಳೆಯರ ರಕ್ಷಣೆಗೆ ಧಾವಿಸಿದ್ದಾರೆ.
ಅಕ್ರಮ ಕಸಾಯಿಖಾನೆಗಳ ವಿರುದ್ಧ ಸಮರ ಸಾರಿರುವ ಅವರು 15 ಕ್ಕೂ ಅಧಿಕ ಕಸಾಯಿಖಾನೆಗಳಿಗೆ ಬೀಗ ಜಡಿಯುವಂತೆ ಮಾಡಿದ್ದಾರೆ.
ವಾರಕ್ಕೆ 2 ಗಂಟೆಯಂತೆ ವರ್ಷಕ್ಕೆ 100 ಗಂಟೆಗಳನ್ನು ಸ್ವಚ್ಛತೆಗೆ ಮೀಸಲಿಡಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿರುವ ಅವರು, ದೊಡ್ಡ ದೊಡ್ಡ ಗಣ್ಯರೂ ಕೈಯಲ್ಲಿ ಪೊರಕೆ ಹಿಡಿಯುವಂತೆ ಮಾಡಿದ್ದಾರೆ. ಸರ್ಕಾರಿ ಕಛೇರಿಗಳಲ್ಲಿ ಗುಟ್ಕಾ, ಪಾನ್ ಮಸಾಲ ನಿಷೇಧಿಸಿದ್ದಾರೆ.
ಯುಪಿಯಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಯನ್ನು ಸುಸ್ಥಿತಿಗೆ ತರಲು ಶತಪ್ರಯತ್ನ ಆರಂಭಿಸಿರುವ ಅವರು, ಅಪರಾಧ, ಗೂಂಡಾಗಿರಿಯ ಬಗ್ಗೆ ಶೂನ್ಯ ತಾಳ್ಮೆ ವಹಿಸುವಂತೆ ಪೊಲೀಸರಿಗೆ ಆದೇಶಿಸಿದ್ದಾರೆ. ರಾತ್ರಿ ವೇಳೆ ಗಸ್ತು ತಿರುಗುವಂತೆ ಸೂಚಿಸಿದ್ದಾರೆ.
ಭ್ರಷ್ಟಾಚಾರವನ್ನು ತೊಲಗಿಸಲು ಕ್ರಮಗಳನ್ನು ಕೈಗೊಂಡಿರುವ ಅವರು ಸರ್ಕಾರಿ ನೌಕರಿಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದಾರೆ.
ರೈತರ ಏಳಿಗೆಗೆ, ಗ್ರಾಮಗಳ ವಿಕಾಸದ ಪ್ರತಿಜ್ಞೆ ಮಾಡಿದ್ದಾರೆ. ಹಳ್ಳಿ ಹಳ್ಳಿಗೂ ನೀರು, ವಿದ್ಯುತ್, ರಸ್ತೆ ನೀಡಲು ಕ್ರಮ ತೆಗೆದುಕೊಂಡಿದ್ದಾರೆ.
ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಪೂರ್ವಾಂಚಲ ಮತ್ತು ಬುಂದೆಲ್ಖಂಡ್ಗಳಿಗೆ ಅಭಿವೃದ್ಧಿ ಮಂಡಳಿ ರಚಿಸಲು ಮುಂದಾಗಿದ್ದಾರೆ.
ಒಟ್ಟಿನಲ್ಲಿ ನರೇಂದ್ರ ಮೋದಿಯ ಕನಸಿನ ರಾಜ್ಯವನ್ನಾಗಿ ಮಾಡುತ್ತೇನೆ ಎಂದು ಸಂಸತ್ತಿನಲ್ಲಿ ನೀಡಿದ ವಾಗ್ದಾನವನ್ನು ಸಾಕರಗೊಳಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೇವಲ 3 ದಿನದಲ್ಲಿ ಅವರು ಕೈಗೊಂಡಿದ್ದಾರೆ.
ಯೋಗಿ ತೆಗೆದುಕೊಂಡ ನಿರ್ಧಾರಗಳು ಮತ್ತು ಅದು ಯುಪಿ ಮೇಲೆ ಬೀರುತ್ತಿರುವ ಪ್ರಭಾವಗಳ ಸಂಪೂರ್ಣ ಮಾಹಿತಿಗೆ ಈ ಕೆಳಗಿನ ವೀಡಿಯೋ ವೀಕ್ಷಿಸಿ.
Video Courtesy : Zee News
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.