ಅಗರ್ತಲಾ: ತ್ರಿಪುರ ರಾಜ್ಯ ರಾಜಕಾರಣದಲ್ಲಿನ ಒಂದು ಪ್ರಮುಖ ಬೆಳವಣಿಗೆಯಂತೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ 16 ರಾಜ್ಯ ಸಮಿತಿ ಸದಸ್ಯರು ಸದಸ್ಯರು ಸೇರಿದಂತೆ ಒಟ್ಟು 400 ಟಿಎಂಸಿ ಸದಸ್ಯರು ಬಿಜೆಪಿಗೆ ಗುರುವಾರ ಸೇರ್ಪಡೆಗೊಂಡಿದ್ದಾರೆ.
ಬಿಜೆಪಿಗೆ ಸೇರಿದ 400 ಸದಸ್ಯರಲ್ಲಿ ಟಿಎಂಸಿ ಪಕ್ಷದ ತ್ರಿಪುರ ಘಟಕದ ಮಾಜಿ ಅಧ್ಯಕ್ಷ ರತನ್ ಚಕ್ರಬರ್ತಿ ಕೂಡ ಒಬ್ಬರಾಗಿದ್ದಾರೆ.
ತ್ರಿಪುರ ಘಟಕದ ಬಿಜೆಪಿ ಅಧ್ಯಕ್ಷ ಬಿಪ್ಲವ್ ದೇಬ್ ಹಾಗೂ ಕೇಂದ್ರದ ರಾಜ್ಯ ರೈಲ್ವೆ ಸಚಿವ ರಾಜನ್ ಗೊಹೆನ್ ಜಂಟಿಯಾಗಿ ರತನ್ ಚಕ್ರಬರ್ತಿ ಅವರಿಗೆ ಬಿಜೆಪಿ ಪಕ್ಷದ ಧ್ವಜ ಹಸ್ತಾಂತರಿಸಿದರು.
ಬಿಜೆಪಿ ಭಾರತದ ಹಿಂದುಳಿದ ಈಶಾನ್ಯ ರಾಜ್ಯದ ಅಭಿವೃದ್ಧಿಗೆ ಗರಿಷ್ಠ ಮಟ್ಟದಲ್ಲಿ ಪ್ರಾಮುಖ್ಯತೆ ನೀಡಿದ ದೇಶದ ಏಕೈಕ ರಾಜಕೀಯ ಪಕ್ಷ. ಬಿಜೆಪಿ ರಾಜ್ಯವನ್ನು ಸಿಪಿಎಂ ಹಿಡಿತದಿಂದ ಮುಕ್ತಗೊಳಿಸಿ, 2018ರ ಚುನಾವಣೆಯಲ್ಲಿ ಸರ್ಕಾರ ರಚಿಸಿ ಜನರಿಗೆ ಪರಿಹಾರ ಒದಗಿಸುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ ಎಂದು ಈ ವೇಳೆ ಚಕ್ರಬರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ತಾನು ಯಾವುದೇ ಶರತ್ತುಗಳಿಲ್ಲದೇ ಬಿಜೆಪಿ ಪಕ್ಷ ಸೇರಿದ್ದು, ಬಿಜೆಪಿ ಬ್ಯಾನರ್ ಅಡಿಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಟಿಎಂಸಿ ಕಾರ್ಯಕರ್ತರನ್ನು ತರುವ ಮೂಲಕ ಪಕ್ಷವನ್ನು ಬಲಪಡಿಸುವುದಾಗಿ ಚಕ್ರಬರ್ತಿ ಹೇಳಿದ್ದಾರೆ.
ಬಿಜೆಪಿ ಸೇರಿದ ಟಿಎಂಸಿ ರಾಜ್ಯ ಸಮಿತಿ ಸದಸ್ಯ ನೀತೈ ಚೌಧರಿ ಅವರು, ಟಿಎಂಸಿ ಪಕ್ಷದ ಒಟ್ಟು 65 ರಾಜ್ಯ ಸಮಿತಿ ಸದಸ್ಯರ ಪೈಕಿ 16 ರಾಜ್ಯ ಸಮಿತಿ ಸದಸ್ಯರು ಬಿಜೆಪಿ ಸೇರಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಬಹುಮತದಿಂದ ಗೆಲ್ಲಲಿದೆ ಎಂದು ಹೇಳಿರುವುದಾಗಿ ರಾಜನ್ ಗೊಹೇನ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.