ನವದೆಹಲಿ: ವಿಶ್ವ ಹವಾಮಾನ ಸಂಸ್ಥೆ ಹಾಗೂ ವಿಶ್ವದಾದ್ಯಂತ ಹವಾಮಾನ ಸಮುದಾಯ ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನವನ್ನಾಗಿ ಆಚರಿಸುತ್ತಿದೆ.
ಮೋಡಗಳು ಹವಾಮಾನ ಸೂಚನೆ ಮತ್ತು ಎಚ್ಚರಿಕೆಗೆ ಕೇಂದ್ರಬಿಂದುವಾಗಿದೆ. ಮೋಡಗಳು ಭೂಮಿಯ ವಾತಾವರಣ ವ್ಯವಸ್ಥೆಗೆ ಅತ್ಯಗತ್ಯ. ಅವು ಹವಾಮಾನ ಬದಲಾವಣೆ ಅಧ್ಯಯನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಹವಾಮಾನ ಬದಲಾವಣೆಗೆ ಮೋಡಗಳು ಬೀರುವ ಪರಿಣಾಮ ಮತ್ತು ಬದಲಾಗುತ್ತಿರುವ ಹವಾಮಾನದಿಂದ ಮೋಡಗಳ ಮೇಲಾಗುವ ಪರಿಣಾಮಗಳನ್ನು ಅರ್ಥೈಸುವುದು ಅಗತ್ಯವಾಗಿದೆ.
ಈ ವರ್ಷ ಹವಾಮಾನ ದಿನದ ಥೀಮ್ ‘ಅಂಡರ್ಸ್ಟ್ಯಾಂಡಿಂಗ್ ಕ್ಲೌಡ್ಸ್’ ಆಗಿದೆ. ಇದು ಹವಾಮಾನ ಮತ್ತು ನೀರಿಗೆ ಮೋಡಗಳ ಪ್ರಾಮುಖ್ಯತೆಯನ್ನು ಬಿಂಬಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.