ನವದೆಹಲಿ: ಮಾರ್ಚ್ ತಿಂಗಳಾಂತ್ಯದೊಳಗೆ ‘ಆಧಾರ್ ಪೇ’ ಆರಂಭಿಸುವಂತೆ ಎಲ್ಲ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದ್ದು, ಇದು ಬೆರಳಚ್ಚು ಬಳಸಿ ನಗದು ವ್ಯವಹಾರ ನಡೆಸಲು ಸಹಾಯಕವಾಗಲಿದೆ.
ಎಲ್ಲ ಬ್ಯಾಂಕ್ಗಳ ಮಾರ್ಚ್ 31ರ ಒಳಗಾಗಿ ಭೀಮ್ ಅಪ್ಲಿಕೇಶನ್ನಲ್ಲಿ ‘ಪೇ ಟು ಆಧಾರ್’ ಸೌಲಭ್ಯ ಸಕ್ರಿಯಗೊಳಿಸಬೇಕು. ಎಸ್ಬಿಐ ಮತ್ತು ಪಂಜಾಬ್ ನ್ಯಾಶನಲ್ ಬ್ಯಾಂಕ್ಗಳು ಈ ವಾರಾಂತ್ಯದೊಳಗೆ ಈ ಸೌಲಭ್ಯ ಒದಗಿಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಭೀಮ್ ಆ್ಯಪ್ನ ಈ ವೈಶಿಷ್ಟ್ಯ ಕೇವಲ 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸುವ ಮೂಲಕ ಪಾವತಿಗಳನ್ನು ಮಾಡಲು ಸಹಾಯಕವಾಗಲಿದೆ.
ಭೀಮ್ ಆ್ಯಪ್ ಉದ್ಯಮಿಗಳು ಗ್ರಾಹಕರ ಜೊತೆ ನಗದು ರಹಿತ ವ್ಯವಹಾರ ನಡೆಸಲು ಅನುಕೂಲವಾಗಲಿದ್ದು, ಗ್ರಾಹಕರು ತಮ್ಮ ಆಧಾರ್ ಸಂಖ್ಯೆ, ಬ್ಯಾಂಕ್ ಹೆಸರು ಜೊತೆಗೆ ದೃಢೀಕರಣಕ್ಕೆ ಬೆರಳಚ್ಚು ಹಾಕಬೇಕಿದೆ. ಈ ಸೇವೆಯನ್ನು ಪಡಯಲು ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕಿದೆ.
ಉದ್ಯಮಿಗಳು ‘ಪೇ ಟು ಆಧಾರ್’ ಮತ್ತು ‘ಆಧಾರ್ ಪೇ’ ವಿಶಿಷ್ಟ್ಯಗಳನ್ನು ಬೆರಳಚ್ಚು ಸಾಧನಕ್ಕೆ ಅಳವಡಿಸುವಂತೆ ಸರ್ಕಾರ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.