ನವದೆಹಲಿ: ಶಿಸ್ತು ಮತ್ತು ಕಠಿಣ ನಿಲುವುಗಳಿಗೆ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅಧಿವೇಶನದ ವೇಳೆ ಸಂಸತ್ತಿಗೆ ಹಾಜರಾಗದ ತನ್ನ ಸಹೋದ್ಯೋಗಿಗಳಿಗೆ ಕಠಿಣ ಸಂದೇಶ ನೀಡಿದ್ದಾರೆ.
ಮಂಗಳವಾರ ಬಿಜೆಪಿ ಸಂಸದೀಯ ಸಭೆಗೆ ಆಗಮಿಸಿದ ಮೋದಿ, ಸಂಸದರ ಹಾಜರಾತಿಯ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ಅಲ್ಲದೇ ಅಧಿವೇಶನ ನಡೆಯುವ ವೇಳೆ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಹಾಜರಿರುವಂತೆ ಸೂಚಿಸಿದ್ದಾರೆ.
ಸಕಾರಣವಿಲ್ಲದೆ ಅಧಿವೇಶನಕ್ಕೆ ಗೈರಾಗುವವರನ್ನು ಯಾವುದೇ ಮುಲಾಜಿಲ್ಲದೆ ಕರೆಸಿ ವಿವರಣೆ ಕೇಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ನಿಮಗಾಗಿ ನಾನು ಚುನಾವಣೆಯನ್ನು ಗೆದ್ದು ಕೊಡಬಲ್ಲೆ ಆದರೆ ಸಂಸತ್ತಿನಲ್ಲಿ ನಿಮ್ಮ ಹಾಜರಾತಿ ಇರುವಂತೆ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂಬುದಾಗಿ ಮೋದಿ ಸಂಸದರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಪ್ರಮುಖವಾದ ಜಿಎಸ್ಟಿ ಮಸೂದೆ ಬಗ್ಗೆಯೂ ಸ್ಪಷ್ಟ ಜ್ಞಾನವನ್ನು ಹೊಂದದ ಕೆಲ ಸಂಸದರ ಬಗ್ಗೆಯೂ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.