ನವದೆಹಲಿ: ಕೇಂದ್ರ ಸಚಿವ ಸಂಪುಟ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಶಾಸನಕ್ಕೆ ಪೂರಕವಾದ 4 ಮಸೂದೆಗಳಿಗೆ ಸೋಮವಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರ ಈ ವಾರಾಂತ್ಯದಲ್ಲಿ ಈ ಮಸೂದೆಯನ್ನು ಮನಿ ಬಿಲ್ ಆಗಿ ಸಂಸತ್ನಲ್ಲಿ ಪರಿಚಯಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಸಚಿವ ಸಂಪುಟ ಜಿಎಸ್ಟಿಯ ನಾಲ್ಕು ಮಸೂದೆಗಳಾದ ಕೇಂದ್ರ ಸರಕು ಮತ್ತು ಸೇವಾ ಬಿಲ್ 2017 (ಸಿ-ಜಿಎಸ್ಟಿ), ಇಂಟಿಗ್ರೇಟೆಡ್ ಜಿಎಸ್ಟಿ 2017 (ಐಜಿಎಸ್ಟಿ), ಕೇಂದ್ರಾಡಳಿತ ಪ್ರದೇಶಗಳ ಜಿಎಸ್ಟಿ ಬಿಲ್ 2017 (ಯುಟಿಜಿಎಸ್ಟಿ) ಮತ್ತು ಜಿಎಸ್ಟಿ ಬಿಲ್ 2017 (ರಾಜ್ಯಗಳಿಗೆ ಪರಿಹಾರ ಜಿಎಸ್ಟಿ ಬಿಲ್)ಗಳಿಗೆ ಅನುಮೋದನೆ ನೀಡಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಜಿಎಸ್ಟಿ ಮಂಡಳಿ ಕಳೆದ ಎರಡು ಸಭೆಗಳಲ್ಲಿ ಈ ನಾಲ್ಕು ಶಾಸನಗಳು ಹಾಗೂ ರಾಜ್ಯ ಜಿಎಸ್ಟಿ (ಎಸ್-ಜಿಎಸ್ಟಿ) ಮಸೂದೆಗಳಿಗೆ ಅನುಮೋದನೆ ನೀಡಿದೆ. ಎಸ್ಜಿಎಸ್ಟಿ ಮಸೂದೆಯನ್ನು ಎಲ್ಲ ರಾಜ್ಯಗಳು ಶಾಸನಸಭೆಯಲ್ಲಿ ಅನುಮೋದನೆ ನೀಡಬೇಕಿದ್ದು, ಉಳಿದ ನಾಲ್ಕು ಮಸೂದೆಗಳನ್ನು ಸಂಸತ್ ಅನುಮೋದನೆ ನೀಡಬೇಕಿದೆ.
ರಾಜ್ಯಗಳು ಪ್ರತ್ಯೇಕ ರಾಜ್ಯ-ಜಿಎಸ್ಟಿ ಮಸೂದೆ ಹಾಗೂ ಸಂಸತ್ತು ಇತರ ಮಸೂದೆಗಳಿಗೆ ಅನುಮೋದನೆ ನೀಡಿದಲ್ಲಿ ಕೇಂದ್ರತೆರಿಗೆಗಳಾದ ಸೇವಾ ತೆರಿಗೆ ಮತ್ತು ಅಬಕಾರಿ ತೆರಿಗೆ ಹಾಗೂ ಎಲ್ಲ ರಾಜ್ಯಗಳ ವ್ಯಾಟ್ ಮತ್ತಿತರ ತೆರಿಗೆಗಳ ವಿಲೀನದೊಂದಿಗೆ ಒಂದು ರಾಷ್ಟ-ಒಂದೇ ತೆರಿಗೆ ಎಂಬ ಜಿಎಸ್ಟಿ ಶಾಸನ ರಚನೆ ಪ್ರಕ್ರತಿಯೆ ಪೂರ್ಣಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.