ವಾಷಿಂಗ್ಟನ್: ಜನಾಂಗೀಯ ದ್ವೇಷ ಅಪರಾಧದಿಂದಾಗಿ ಕಳೆದ ತಿಂಗಳು ಸಾವನ್ನಪ್ಪಿದ್ದ ಭಾರತೀಯ ಟೆಕ್ಕಿ ಶ್ರೀನಿವಾಸ್ ಕಚಿಭೋಟ್ಲ ಅವರಿಗೆ ಗೌರವ ಅರ್ಪಿಸಲು ಅಮೇರಿಕಾದ ಕಾನ್ಸಾಸ್ ರಾಜ್ಯ ಮಾರ್ಚ್ 16ರನ್ನು ‘ಭಾರತೀಯ-ಅಮೇರಿಕನ್ ಅಪ್ರಿಸಿಯೇಷನ್ ಡೇ’ ಆಗಿ ಆಚರಿಸಿದೆ.
ಅಮೇರಿಕಾದ ನೌಕಾಪಡೆ ಅಧಿಕಾರಿ ಆಡಮ್ ಪರಿಂಟನ್ ಫೆ.22ರಂದು ಒಲೇಟ್ ಎಂಬಲ್ಲಿ ಬಾರ್ ಒಂದರಲ್ಲಿ ಶ್ರೀನಿವಾಸ್ ಕಚಿಭೋಟ್ಲ ಹಾಗೂ ಆತನ ಸ್ನೇಹಿತ ಅಲೋಕ್ ಮದಸಾನಿ ಮೇಲೆ ಗುಂಡಿನ ದಾಳಿ ನಡೆಸಿದ್ದು, ನಂತರ ‘ಗೆಟ್ ಔಟ್ ಆಫ್ ಮೈ ಕಂಟ್ರಿ’ ಎಂದು ಹೇಳಿದ್ದಾನೆ.
ದಾಳಿಯಲ್ಲಿ ಅಲೋಕ್ ಮದಸಾನಿ ಹಾಗೂ ಅಮೇರಿಕಾದ ನಾಗರಿಕ ಇಯಾನ್ ಗ್ರಿಲ್ಲಟ್ ಗಾಯಗೊಂಡಿದ್ದರು.
ಈ ಅನರ್ಥ ಘಟನೆಯಿಂದ ರಾಜ್ಯವನ್ನು ವಿಭಜಿಸಲು ಅಥವಾ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಭಾರತೀಯ ಸಮುದಾಯದ ಅನನ್ಯ ಕೊಡುಗೆ ಕಾನ್ಸಾಸ್ ರಾಜ್ಯ ಉತ್ತಮ ಸ್ಥಾನ ಪಡೆಯುವಂತೆ ಮಾಡಿದೆ. ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಕಾನ್ಸಾಸ್ ಗವರ್ನರ್ ಸ್ಯಾಮ್ ಬ್ರೌನ್ಬ್ಯಾಕ್ ಹೇಳಿದ್ದಾರೆ.
ಈ ಘಟನೆ ಎರಡೂ ದೇಶಗಳ ನಡುವಿನ ಮೌಲ್ಯಗಳು, ನಂಬಿಕೆಗಳನ್ನು ಮರೆಮಾಚಲು ಸಾಧ್ಯವಿಲ್ಲ. ನಾವು ಕಾನ್ಸಾಸ್ ರಾಜ್ಯದಲ್ಲಿ ಭಾರತೀಯ ಸಮುದಾಯದವರಿಗೆ ಸ್ವಾಗತ ಮತ್ತು ಬೆಂಬಲವನ್ನು ಮುಂದುವರೆಸಲಿದ್ದೇವೆ ಎಂದು ಸಮಾರಂಭವೊಂದರಲ್ಲಿ ಸ್ಯಾಮ್ ಬ್ರೌನ್ಬ್ಯಾಕ್ ಹೇಳಿದ್ದಾರೆ.
ಸಮಾರಂಭದಲ್ಲಿ ಅಲೋಕ್ ಮದಸಾನಿ ಹಾಗೂ ಇಯಾನ್ ಗ್ರಿಲ್ಲಟ್ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.