ಕ್ಯಾಲಿಫೋರ್ನಿಯಾ: ವಿಜ್ಞಾನಿಗಳು ಸಿಲಿಕಾನ್ ನ್ಯಾನೋವೈರ್ ಬಳಸಿ ಬೆಳನ್ನು ಗುರುತಿಸುವ ಮತ್ತು ಅದರಿಂದ ಚಲಿಸುವ ವಿದ್ಯುತ್ನಿಂದ ರೆಟಿನಾವನ್ನು ಉದ್ದೀಪನಗೊಳಿಸುವ ಹೊಸ ಕಣ್ಣಿನ ಕಸಿ ಅಭಿವೃದ್ಧಿಪಡಿಸಿದ್ದಾರೆ. ಇದು ವಿಶ್ವದಾದ್ಯಂತ ಲಕ್ಷಾಂತರ ಜನರಲ್ಲಿ ದೃಷ್ಟಿ ಪುನಃಸ್ಥಾಪಿಸಲು ಸಹಾಯಕವಾಗಲಿದೆ.
ಈ ಹೊಸ ಅಭಿವೃದ್ಧಿ ಕಣ್ಣಿನ ರೆಟಿನಾಗಳ ನರಕೋಶಗಳು ಬೆಳಕನ್ನು ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಮರುಸ್ಥಾಪಿಸುತ್ತದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಸ್ಯಾನ್ ಡಿಯಾಗೋ ಹಾಗೂ ಅಮೇರಿಕಾ ಮೂಲದ ಸ್ಟಾರ್ಟ್ಅಪ್ ನ್ಯಾನೋವಿಷನ್ ಬಯೋಸೈನ್ಸ್ಸ್ ಸಂಶೋಧಕರು ಪ್ರೋಟೋಟೈಪ್ ಸಂಪರ್ಕ ಸಾಧನದಿಂದ ಇಲಿಯ ರೆಟಿನಾಗಳು ಬೆಳಕಿಗೆ ಪ್ರತಿಕ್ರಿಯಿಸುವುದನ್ನು ಕಂಡು ಹಿಡಿದಿದ್ದಾರೆ.
ಈ ತಂತ್ರಜ್ಞಾನ ಮಧುಮೇಹದಿಂದ ದೃಷ್ಟಿ ಹೀನತೆ, ಅಕ್ಷಿಪಟಲದ ಅವನತಿ, ರೆಟಿನೈಟಿಸ್ ಪಿಗ್ಮೆಂಟೋಸ ಸೇರಿದಂತೆ ದೃಷ್ಟಿಹೀನತೆಗೆ ಕಾರಣವಾದ ನರಗಳನ್ನು ಕುಮದಿಸುವ ಕಾಯಿಲೆಗಳಿಂದ ಬಳಲುತ್ತಿರುವ ಸಾವಿರಾರು ಮಂದಿಗೆ ಸಹಾಯಕವಾಗಲಿದೆ.
ಆದರೆ ಇದರಿಂದ ಅಂಧರಲ್ಲಿ ಪ್ರಸ್ತುತ ಕೃತಕ ರೆಟಿನಾಗಳಲ್ಲಿ ದೃಷ್ಟಿ ಮರಳಿ ಕ್ರಿಯಾತ್ಮಕಗೊಳಿಸುವ ಸಾಧ್ಯತೆ ಸೀಮಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.