ಒಂದು ಡಜನ್ ಬಜೆಟ್ ಮಂಡಿಸಿದ ಖ್ಯಾತಿಗೆ ಸಿದ್ದರಾಮಯ್ಯನವರು ಪಾತ್ರವಾಗಿದ್ದಾರೆ. ಆದರೆ ಅವರು, ಒಂದಿಷ್ಟು ವರ್ಗಗಳ ಕಲ್ಯಾಣಕ್ಕಾಗಿ ಸಾಕಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಉಳಿದಂತೆ ಒಂದಿಷ್ಟು ಅಭಿವೃದ್ಧಿ ಕಾರ್ಯದ ಮುನ್ಸೂಚನೆ ನೀಡಿದ್ದಾರೆ. ಆದರೆ ಇವೆಲ್ಲವೂ ಬರುವ ಒಂದು ವರ್ಷದಲ್ಲಿ ಅನುಷ್ಠಾನ ಸಾಧ್ಯವೇ? ಇದು ಸಮತೋಲಿತ ಬಜೆಟ್ ಎನ್ನಬಹುದೇ? ನಾಯಕರು ಏನಂತಾರೆ ಕೇಳಿ.
ಇದೊಂದು ಚುನಾವಣಾ ಪ್ರಣಾಳಿಕೆ
ಮಾನ್ಯ ಸಿದ್ದರಾಮಯ್ಯನವರು ಮಂಡಿಸಿದ್ದು ಬಜೆಟ್ ಎನ್ನುವುದಕ್ಕಿಂತ ಚುನಾವಣಾ ಪ್ರಣಾಳಿಕೆ ಎನ್ನಬಹುದು. ರೈತರು ನಿರೀಕ್ಷಿಸಿದ ಸಾಲ ಮನ್ನಾ ಮಾಡಲು ಮನಸ್ಸು ಮಾಡದ ಮುಖ್ಯಮಂತ್ರಿಗಳು ರೈತ ವಿರೋಧಿ ನಿಲುವನ್ನು ತಳೆದಿದ್ದಾರೆ ಎನ್ನಬಹುದು. ಅಲ್ಲದೇ ಸಾಮಾಜಿಕ ಸಮಾನತೆಗೂ ಇದು ವಿರುದ್ಧವಾಗಿದೆ.
ಪ್ರಲ್ಹಾದ ಜೋಶಿ, ಸಂಸದರು,
ಧಾರವಾಡ, ಉತ್ತರ ಲೋಕಸಭಾ ಕ್ಷೇತ್ರ
ನೋಟ್ ಬ್ಯಾನ್ ಎಫೆಕ್ಟ್ ಪ್ರಸ್ತಾಪವಿಲ್ಲ
ನೋಟ್ಬ್ಯಾನ್ನಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿದೆ, ಆ ಕುರಿತು ಬಜೆಟ್ನಲ್ಲಿ ತಿಳಿಸುವುದಾಗಿ ಹೇಳಿದ್ದ ಸಿದ್ದರಾಮಯ್ಯನವರು ಅದರ ಗೊಡವೆಗೇ ಹೋಗಿಲ್ಲ. ಇದರರ್ಥ ಅವರು ಮೋದಿ ಅವರ ನೀತಿಯನ್ನು ಕೇವಲ ಟೀಕಿಸುವ ಉದ್ದೇಶದಿಂದ ಹಾಗೇ ಹೇಳಿದ್ದರು ಎನ್ನಬಹುದು.
ಸಾಲ ಮನ್ನಾ ಮಾಡದೇ ರೈತ ವಿರೋಧಿ ನೀತಿ ಅನುಸರಿಸಿದ್ದಾರೆ. ಇದೊಂದು ಸಾಲದ ಬಜೆಟ್ ಆಗಿದೆ. ಅಲ್ಲದೇ ರೈತರ ತಲೆ ಮೇಲೆ 37 ಸಾವಿರ ಕೋಟಿ ಭಾರ ಹೊರಿಸಿದ್ದಾರೆ.
ಜಗದೀಶ ಶೆಟ್ಟರ್, ವಿಧಾನ ಸಭೆ ವಿಪಕ್ಷ ನಾಯಕ
ರೈತ ವಿರೋಧಿ ಬಜೆಟ್
ರೈತರ ಮೇಲಿನ ಎಲ್ಲ ಸಾಲವನ್ನ ಮನ್ನಾ ಮಾಡುವ ನಿರೀಕ್ಷೆ ಹುಸಿಯಾಗಿದೆ. ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಸಿದ್ದರಾಮಯ್ಯನವರ ಸರ್ಕಾರ ಈ ಕುರಿತು ಯಾವತ್ತೂ ಸ್ಪಂದಿಸಿಲ್ಲ.
ಇದೊಂದು ಅತ್ಯಂತ ನಿರಾಶಾದಾಯಕ ಬಜೆಟ್.
ರಮೇಶ್ ಪಾಟೀಲ್ , ಅಧ್ಯಕ್ಷ
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ
ಜಾತಿ ಆಧರಿತ ಬಜೆಟ್
ಕೇವಲ ಮುಸ್ಲಿಂ, ಹಿಂದುಳಿದವರಿಗೆ ಬಜೆಟ್ನಲ್ಲಿ ಆದ್ಯತೆ ನೀಡಲಾಗಿದೆ. ಮೌಲ್ವಿಗಳ ವೇತನವನ್ನು ಹೆಚ್ಚಿಸಿದ ಸಿದ್ದರಾಮಯ್ಯನವರಿಗೆ, ಪುರೋಹಿತರು, ಪಂಡಿತರು ಲೆಕ್ಕಕ್ಕೇ ಇಲ್ಲವೇ? ಹೀಗೇ ಒಂದು ನಿರ್ದಿಷ್ಟ ಧರ್ಮ ಅಥವಾ ಜಾತಿಗೆ ಸೀಮಿತವಾಗಿ ಒಲವು ತೋರಿಸುವುದು ಯಾವ ನ್ಯಾಯ? ಕೇವಲ ಅಹಿಂದ ಬೆನ್ನು ಹತ್ತಿದರೆ ಉಳಿದವರೇನು ಮಾಡಬೇಕು? ತೀವ್ರ ಅಸಮಾಧಾನವಾಗಿದೆ.
ಪ್ರಲ್ಹಾದಾಚಾರ್ಯ ತೊನಸಿ, ಪುರೋಹಿತರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.