ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳನ್ನೇ ಕೇಂದ್ರವಾಗಿಟ್ಟುಕೊಂಡು ಸಿದ್ದರಾಮಯ್ಯನವರು ಬಜೆಟ್ ಮಂಡಿಸಿದ್ದು, ಅದನ್ನು ಅಹಿಂದ ಬಜೆಟ್ ಎಂಬ ಮಾತು ಕೇಳಿಬರುತ್ತಿವೆ.
ಅಲ್ಪಸಂಖ್ಯಾತರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ರಾಜ್ಯದಲ್ಲಿ 200 ಮೌಲಾನ ಆಜಾದ್ ಶಾಲೆಯ ಸ್ಥಾಪನೆ, ಮೌಲ್ವಿಗಳ ವೇತನ ಹೆಚ್ಚಳ, ಶಾದಿ ಮಾಲ್ ಸಮುದಾಯ ಭವನಕ್ಕೆ ಅನುದಾನ, ಸೇನೆಯಲ್ಲಿ ಸೇರಲು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ, ಮಂಗಳೂರಲ್ಲಿ ಹಜ್ ಭವನ ನಿರ್ಮಾಣ ಹೀಗೇ ವಿವಿಧ ಯೋಜನೆಗಳನ್ನು ಅಲ್ಪಸಂಖ್ಯಾತರಿಗಾಗಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಅಂತರ್ಜಾತಿ ವಿವಾಹ ಮಾಡಿಕೊಳ್ಳುವವರಿಗೆ 2 ಲಕ್ಷ ಸಹಾಯಧನ, ಪ.ಜಾತಿ, ಪ.ಪಂಗಡದ ಮಹಿಳೆಯರ ಮರು ಮದುವೆಗೆ 3 ಲಕ್ಷ ರೂಪಾಯಿ ಸಹಾಯ ಧನ, ಆದಿವಾಸಿ ಜನರ ಉದ್ಯೋಗಕ್ಕೆ 200 ಕೋಟಿ, ಆಶಾದೀಪ ಯೋಜನೆಯ ಅಡಿಯಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಪ.ಜಾತಿ, ಪ.ಪಂಗಡದ ಕಾರ್ಮಿಕರಿಗೆ ಉದ್ಯೋಗ ಒದಗಿಸುವಿಕೆ, ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಕೌಶಲ ತರಬೇತಿಗೆ ಅವಕಾಶ.
ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಶಾಲೆಗಳ ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದಾರೆ. ಕುರಿಗಾಹಿ, ದನಗಾಹಿ, ಮಹಿಳೆಯರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಕ್ಕೆ ಹೆಚ್ಚು ಮನ್ನಣೆ. ಮಾಂಸದ ಅಂಗಡಿಗಳಿಗೆ ವಿಶೇಷ ಅನುದಾನ. ಕುರಿ ಸಂವರ್ಧನಾ ಕೇಂದ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಇನ್ನುಳಿದಂತೆ ಉಳಿದ ವರ್ಗಗಳ ಪ್ರಸ್ತಾಪವನ್ನೇ ಮಾಡದ ಮುಖ್ಯಮಂತ್ರಿಗಳು ಮೇಲ್ವರ್ಗದವರನ್ನು ನಿರ್ಲಕ್ಷಿಸಿದ್ದಾರೆ. ಈ ಮೂಲಕ ತಮ್ಮ ’ಹಿಂದುಳಿದ ಪ್ರೇಮ’ವನ್ನು ಬಜೆಟ್ನಲ್ಲಿ ಮೆರೆದಿದ್ದಾರೆ. ಜಾತ್ಯತೀತ ರಾಷ್ಟ್ರದಲ್ಲಿ ಈ ರೀತಿ ಸೀಮಿತ ಜಾತಿ ಆಧರಿತ ಬಜೆಟ್, ಸಮಾನತೆಯನ್ನು ಸಾಧಿಸುವಲ್ಲಿ ವಿಫಲವಾಗಿದೆ ಎನ್ನಬಹುದು.
ಯುವಶಕ್ತಿಗೆ ಆದ್ಯತೆ ಇಲ್ಲ, ಡಿಜಿಟಲೀಕರಣ, ಪಾರದರ್ಶಕತೆಗೆ ಪೂರಕವಾದ ಯೋಜನೆಗಳಿಲ್ಲ, ರೈತರಿಗೆ ಸಾಲ ಮನ್ನಾ ಇಲ್ಲ, ಅಲ್ಲದೇ ಇದನ್ನು ದೂರದೃಷ್ಟಿಯುಳ್ಳ ಬಜೆಟ್ ಎನ್ನುವ ಅಂಶಗಳು ಕಾಣುತ್ತಲೇ ಇಲ್ಲ. ಎಲ್ಲದಕ್ಕಿಂತಲೂ ಇದು ಮುಂಬರುವ ಚುನಾವಣೆಯ ಮೇಲೆ ಕಣ್ಣಿಟ್ಟು ರೂಪಿಸಿರುವ ಒಂದು ತಂತ್ರವಷ್ಟೇ. ಆದರೆ ನಿಗದಿತ ವರ್ಗಕ್ಕೆ ನೀಡಿದ ಹಣವೆಲ್ಲ ಮತಗಳಾಗಿ ಪರಿವರ್ತನೆಯಾಗುವ ಸಾಧ್ಯತೆ ಕಷ್ಟಸಾಧ್ಯ. ಇಲ್ಲಿ ಎಲ್ಲ ವರ್ಗಗಳೂ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯವಿತ್ತು ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.