ನವದೆಹಲಿ: ತನ್ನ ಅಧಿಕಾರದ ಮೊದಲ ವರ್ಷದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿಯ ಹೊರಗಡೆ ಜಾಹೀರಾತು ಬಿಡುಗಡೆ ಮಾಡುವುದಕ್ಕಾಗಿ ರೂ.29 ಕೋಟಿಯನ್ನು ವ್ಯಯ ಮಾಡಿದೆ ಎಂಬ ಅಂಶವನ್ನು ಸಿಎಜಿ ವರದಿ ಬಹಿರಂಗಪಡಿಸಿದೆ.
ತನ್ನ ಜವಾಬ್ದಾರಿಯನ್ನೂ ಮೀರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ದೆಹಲಿಯ ಹೊರಗಡೆ ಜಾಹೀರಾತುಗಳನ್ನು ಬಿಡುಗಡೆಗೊಳಿಸಿದೆ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.
ಅಲ್ಲದೇ ರೂ.24 ಕೋಟಿಗೆ ಮೇಲ್ಪಟ್ಟು ಅದು ಜಾಹೀರಾತಿಗಾಗಿ ವ್ಯಯಿಸಿರುವುದು ಹಣಕಾಸು ಆದ್ಯತೆಯ ಮತ್ತು ಸುಪ್ರೀಂ ನಿಯಮಗಳ ಉಲ್ಲಂಘನೆ ಎಂದು ತಿಳಿಸಲಾಗಿದೆ. ಸರ್ಕಾರ ಕಾರ್ಯಗಳನ್ನು ಎಎಪಿಯ ಸಾಧನೆ ಎಂದು ಬಿಂಬಿಸಿ ಅದರ ಜಾಹೀರಾತನ್ನು ಎಎಪಿ ಚಿಹ್ನೆಯನ್ನು ಹಾಕಿ ಬಿಡುಗಡೆ ಮಾಡಲಾಗುತ್ತಿದೆ ಎಂದಿದೆ.
ಸಿಎಜಿ ನೀಡಿದ ಈ ವರದಿಯನ್ನು ದೆಹಲಿ ವಿಧಾನಸಭೆಯ ಮುಂದೆ ಇಡಲಾಗಿದ್ದು, ಇದೀಗ ಇತರ ರಾಜಕೀಯ ಪಕ್ಷಗಳು ಎಎಪಿಯ ವಿರುದ್ಧ ತೀವ್ರ ವಾಗ್ ಪ್ರಹಾರ ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.