ಕೋಲ್ಕತ್ತಾ: ಅಧಿಕೃತವಾಗಿ ಟೆಸ್ಟ್ ಕ್ರಿಕೆಟ್ ಆರಂಭಗೊಂಡು ಇಂದಿಗೆ 140 ವರ್ಷಗಳು ಸಂದಿವೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ನಡುವೆ 1877ರಲ್ಲಿ ಮೊದಲ ಬಾರಿಗೆ ಅಧಿಕೃತ ಟೆಸ್ಟ್ ಪಂದ್ಯವನ್ನುಆಯೋಜಿಸಲಾಗಿತ್ತು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಈ ಪಂದ್ಯವನ್ನು 45 ರನ್ಗಳ ಮೂಲಕ ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಎರಡು ಸರಣಿಗಳ ಟೆಸ್ಟ್ ಇದಾಗಿದ್ದು, ಬಳಿಕದ ಸರಣಿಯನ್ನು ಇಂಗ್ಲೆಂಡ್ ಅದೇ ಮೈದಾನದಲ್ಲಿ 4 ವಿಕೆಟ್ ಮೂಲಕ ಗೆದ್ದುಕೊಂಡಿತ್ತು.
ಇದೀಗ ಗೂಗಲ್ ತನ್ನ ಡೂಡಲ್ ಮೂಲಕ ಟೆಸ್ಟ್ಗೆ 140 ವರ್ಷಗಳಾದ ಸಂಭ್ರಮವನ್ನು ಆಚರಿಸಿದೆ. ಬ್ಯಾಟ್ಸ್ಮನ್, ಬೌಲರ್, ಫಿಲ್ಡರ್ಗಳು ಚಿಮ್ಮಿದ ಕೆಂಪು ಬಾಲ್ನ್ನೇ ದಿಟ್ಟಿಸುವಂತೆ ಡೂಡಲನ್ನು ವಿನ್ಯಾಸಗೊಳಿಸಿದೆ. ಈ ಮೂಲಕ ಕ್ರೀಡಾಸ್ಫೂರ್ತಿಯನ್ನು ತುಂಬಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.