ನವದೆಹಲಿ: ಪಾಕಿಸ್ಥಾನ ಗಡಿಯಲ್ಲಿ ಕದನವಿರಾಮ ಉಲ್ಲಂಘನೆ ಮಾಡಿ ಶೆಲ್ ದಾಳಿಗಳನ್ನು ನಡೆಸುತ್ತಿದೆ. ಇದರಿಂದಾಗಿ ವಾಸ್ತವ ಗಡಿ ನಿಯಂತ್ರಣ ರೇಖೆ ಸಮೀಪದ ವ್ಯಾಪಾರ ಸೌಲಭ್ಯ ಕೇಂದ್ರವೂ ಹಾನಿಗೊಳಗಾಗಿದೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಭಾರತ ಪೂಂಚ್-ರಾವಲ್ಕೋಟ್ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿದೆ.
ಭಾನುವಾರದಿಂದ ಪಾಕಿಸ್ಥಾನದ ಸೈನಿಕರು ಭಾರತದ ಗಡಿಯತ್ತ ಅಪ್ರಚೋದಿತ 88ಎಂಎಂ ಮೋರ್ಟರ್ ಶೆಲ್ ದಾಳಿಗಳನ್ನು ನಡೆಸುತ್ತಿದ್ದಾರೆ. ಎಲ್ಒಸಿ ಸಮೀಪದ ನಾಗರಿಕರು ಮತ್ತು ಸೈನಿಕರು ಇವರ ಟಾರ್ಗೆಟ್ ಎನ್ನಲಾಗಿದೆ.
ಚಕನ್ ದ ಭಾಗ್ನಲ್ಲಿನ ವ್ಯಾಪಾರ ಸೌಲಭ್ಯ ಕೇಂದ್ರ ಸೋಮವಾರ ಶೆಲ್ ದಾಳಿಯಿಚಿದಾಗಿ ಹಾನಿಗೊಳಗಾಗಿದೆ. ಇದರಿಂದಾಗಿ ಬಸ್ ಸೇವೆ ಸ್ಥಗಿತಗೊಂಡಿದ್ದು, ಶಾಲೆಗಳನ್ನು ಕೂಡ ಮುಂಜಾಗೃತ ಕ್ರಮವಾಗಿ ಮುಚ್ಚಲಾಗಿದೆ.
ಇದೀಗ ಭಾರತ ಪೂಂಚ್-ರಾವಲ್ಕೋಟ್ ಬಸ್ ಸಂಚಾರವನ್ನು ಸ್ಥಗಿತ ಮಾಡಿದೆ. ಅಲ್ಲದೇ ಪಾಕ್ನೊಂದಿಗಿನ ಕ್ರಾಸ್ ಬಾರ್ಡರ್ ವಹಿವಾಟನ್ನೂ ನಿಲ್ಲಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.