ಮುಂಬಯಿ: ಸಾಂಪ್ರದಾಯಿಕ ಭೋಜನ ಸೇವನೆ ಇನ್ನು ಮುಂದೆ ಒಂದು ರೀತಿ ಸಂತೋಷದಾಯಕವಾಗಲಿದೆ. ಮುಂಬಯಿಯ ಬಾಂದ್ರಾ-ವರ್ಲಿ ಸಮುದ್ರದಲ್ಲಿ ತನ್ನ ಮೊದಲ ತೇಲುವ ಹೋಟೆಲ್-ಎಬಿ ಸೆಲೆಸ್ಟಿಯಲ್ ಹೊಂದಿದೆ.
ಈ ಹೊಸ ಹೋಟೆಲ್ ಬಾಂದ್ರಾ-ವರ್ಲಿ ಸಮುದ್ರ ಲಿಂಕ್ ಅಡಿಯಲ್ಲಿ ಬಂದ್ರಾದಲ್ಲಿನ ಮಹಾರಾಷ್ಟ್ರ ಕಡಲು ಮಂಡಳಿ ಜೆಟ್ಟಿಯಲ್ಲಿ ನಿರ್ಮಿಸಲಾಗಿದೆ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ತಿಳಿಸಿದೆ.
ಈ ಐಶಾರಾಮಿ ತೇಲುವ ಹೋಟೆಲ್ನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಉದ್ಘಾಟಿಸಿದ್ದಾರೆ.
ಈ ಹೋಟೆಲ್ನ ಪರಿಕಲ್ಪನೆಯನ್ನು ಡಬ್ಲ್ಯೂಬಿ ಇಂಟರ್ನ್ಯಾಶನಲ್ ಕನ್ಸಲ್ಟೆಂಟ್ (ಎಬಿ ಸೆಲೆಸ್ಟಿಯಲ್ ಸಂಸ್ಥಾಪಕ) ಮಹಾರಾಷ್ಟ್ರ ಪ್ರವಾಸೋದ್ಯಮ ನಿಗಮದ ಸಹಭಾಗಿತ್ವದ ಮೂಲಕ ಕಲ್ಪಿಸಲಾಗಿದೆ.
ಎಬಿ ಸೆಲೆಸ್ಟಿಯಲ್ನ್ನು ಅಮೇರಿಕಾದಲ್ಲಿ ವಿನ್ಯಾಸಗೊಳಿಸಿ ಆಮದು ಮಾಡಲಾಗಿದೆ. ಇದು ಮೂರು ಹಂತದ ಉಪಹಾರ ಹಾಲ್, ಎರಡು ಹಡಗುಗಳು, 4 ಅಂತಸ್ತುಗಳಲ್ಲಿ ಸುಮಾರು 660 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿದೆ.
ಈ ಹೋಟೆಲ್ನ್ನು ಶ್ರೀಮಂತ ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿ ನಿರ್ಮಿಸಲಾಗಿದ್ದು, ಇದು ಎರಡು ರೆಸ್ಟೋರೆಂಟ್ಗಳು, 24 ತಾಸುಗಳ ಕಾಫಿ ಶಾಪ್ ಅಳವಡಿಸಲಾದ ಕ್ಲಬ್ ಲಾಂಜ್ನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.