ತಿರುವನಂತಪುರಂ: ಮಣಿಪುರ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಮಾನವಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಮನಃಶಾಂತಿಗಾಗಿ ಕೇರಳದ ಆಶ್ರಮವೊಂದರಲ್ಲಿ ಕೆಲಕಾಲ ತಂಗಲು ನಿರ್ಧರಿಸಿದ್ದಾರೆ.
ಇಂದು ತನ್ನ 45ನೇ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಇರೋಮ್ ಶರ್ಮಿಳಾ ಕೇರಳದ ಬುಡಕಟ್ಟು ಪ್ರಾಬಲ್ಯವುಳ್ಳ ಅಟ್ಟಪಾಡಿಯ ಶಾಂತಿ ಆಶ್ರಮದಲ್ಲಿ ಅವರು ನೆಲೆಸಲಿದ್ದಾರೆ. ಇಲ್ಲೇ ಖಾಯಂ ಆಗಿ ನೆಲೆ ನಿಲ್ಲುವ ಯೋಜನೆ ಅವರಿಗಿದೆಯೇ ಎಂಬ ಬಗ್ಗೆ ಇನ್ನೂ ಖಚಿತವಾಗಿಲ್ಲ.
ಉಮಾ ಪ್ರೇಮನ್ ಎಂಬ ಮಾನವತಾವಾದಿ ನಡೆಸುತ್ತಿರುವ ಈ ಆಶ್ರಮದಲ್ಲಿ ಯೋಗ, ಧ್ಯಾನ ಹೇಳಿಕೊಡಲಾಗುತ್ತದೆ. ಆರ್ಯುವೇದ್ ಚಿಕಿತ್ಸೆಯೂ ಇದೆ.
16 ವರ್ಷಗಳ ಕಾಲ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದ ಇರೋಮ್ ಮಣಿಪುರ ಚುನಾವಣೆಯಲ್ಲಿ ಕೇವಲ 90 ಮತಗಳನ್ನು ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.