ವಾಷಿಂಗ್ಟನ್: ಉತ್ತರಪ್ರದೇಶ, ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿನ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಗೆಲ್ಲುವ ನೆಚ್ಚಿನ ನಾಯಕರಾಗಿದ್ದಾರೆ ಎಂದ ಅಮೆರಿಕಾದ ಭಾರತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ ಯಶಸ್ಸು ಅಸಮಾನ್ಯವಲ್ಲ ಎಂಬುದನ್ನು ಈಗಷ್ಟೇ ಅಂತ್ಯಗೊಂಡ 5 ರಾಜ್ಯಗಳ ಚುನಾವಣಾ ಫಲಿತಾಂಶ ತೋರಿಸಿದೆ ಎಂಬುದಾಗಿ ಒಬ್ಬ ತಜ್ಞ ಅಭಿಪ್ರಾಯಪಟ್ಟರೆ, ಮೋದಿ 2019ರ ನಂತರವೂ ಭಾರತವನ್ನು ಮುನ್ನಡೆಸಲಿದ್ದಾರೆ ಎಂಬುದಾಗಿ ಮತ್ತೋರ್ವರು ಅಭಿಪ್ರಾಯ ಪಟ್ಟಿದ್ದಾರೆ.
‘ಅಸೆಂಬ್ಲಿ ಚುನಾವಣೆಯ ಫಲಿತಾಂಶ ಮಹತ್ವದ ಬದಲಾವಣೆಯೇನಲ್ಲ, 2014ರ ಚುನಾವಣೆ ಅಸಮಾನ್ಯವಲ್ಲ ಎಂಬುದನ್ನು ಯುಪಿ ಫಲಿತಾಂಶ ತೋರಿಸಿದೆ’ ಎಂಬುದಾಗಿ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾನಿಲಯದ ಪೊಲಿಟಿಕಲ್ ಸೈನ್ಸ್ ಮತ್ತು ಇಂಟರ್ನ್ಯಷನಲ್ ಅಫೇರ್ಸ್ನ ಅಸಿಸ್ಟೆಂಟ್ ಪ್ರೊಫೆಸರ್ ಆಡಂ ಝಿಗ್ಫೆಲ್ಡ್ ಹೇಳಿದ್ದಾರೆ.
ಮೋದಿ 2019ರ ಚುನಾವಣೆ ಗೆಲ್ಲೋ ಫೇವರೇಟ್ ಎಂಬುದನ್ನು ಈ ಚುನಾವಣೆ ತೋರಿಸಿದೆ ಎಂದು ಅಮೆರಿಕನ್ ಎಂಟರ್ಪ್ರೈಸಸ್ ಇನ್ಸ್ಟಿಟ್ಯೂಟ್ನ ಸದಾನಂದ ಧುಮೆ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.