ಜೈಪುರ: ಪಠ್ಯಕ್ರಮದಲ್ಲಿ ವಿದೇಶಿ ಲೇಖಕರನ್ನು ತೆಗೆದು ಹಾಕಿದ ನಂತರ ರಾಜಸ್ಥಾನ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗ ಪ್ರಬಂಧಗಳ ವಿಷಯಗಳಲ್ಲಿ ಕೃತಿಗಳನ್ನು ಬದಲಿಸಿದೆ. ಪ್ರಬಂಧಗಳ ವಿಷಯದಲ್ಲಿ ವೇದ ಮತ್ತು ಸುವ್ಯವಸ್ಥೆ, ಭಗವಾನ್ ಶ್ರೀಕೃಷ್ಣ, ಗೀತೆಯ ಪ್ರಸ್ತುತತೆ, ಮಹಾತ್ಮ ಗಾಂಧಿ, ಯೋಗದ ಮೂಲಕ ಒತ್ತಡ ನಿರ್ವಹಣೆ ಮೊದಲಾದ ವಿಷಯಗಳನ್ನು ಸೇರಿಸಲು ಸೂಚಿಸಿದೆ.
ಎಂ.ಕಾಂ. ವಿದ್ಯಾರ್ಥಿಗಳ ಸೆಮಿಸ್ಟರ್ನ ಪ್ರಬಂಧದಲ್ಲಿ ಬ್ಯಾಂಕಿಂಗ್, ಹಣಕಾಸು, ಸರ್ಕಾರದ ನಿರ್ದಿಷ್ಟ ಆರ್ಥಿಕ ಸಂಸ್ಥೆಗಳ ಅಧ್ಯಯನ ಮುಂತಾದ ವಿಷಯಗಳ ಬದಲು ವೇದ, ಗೀತೆ ವಿಷಯಗಳನ್ನು ಸೇರಿಸಲಾಗಿದೆ.
ವಿಶ್ವದಾದ್ಯಂತ ನಿರ್ವಹಣೆ ರೂಪಿಸುವಲ್ಲಿ ಭಾರತೀಯ ಗ್ರಂಥಗಳು, ಧಾರ್ಮಿಕ ವ್ಯಕ್ತಿಗಳು, ಭಾರತೀಯ ತತ್ವಜ್ಞಾನಿಗಳು ಮಾಡಿದ ಶ್ರೇಷ್ಠ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಈ ಕೃತಿಗಳು ಆಧುನಿಕ ನಿರ್ವಹಣಾ ವ್ಯವಸ್ಥೆಯ ತಳಹದಿಯ ಎಲ್ಲ ಅಂಶಗಳನ್ನು ಹೊಂದಿದೆ ಎಂದು ವಾಣಿಜ್ಯ ಕಾಲೇಜಿನ ಮಾಜಿ ಪ್ರಾಂಶುಪಾಲ ಹಾಗೂ ಪಠ್ಯಕ್ರಮ ಪರಿಷ್ಕರಣೆ ಸಮಿತಿಯ ಮಾಜಿ ಮುಖ್ಯಸ್ಥ ಪ್ರೊ. ನವೀನ್ ಮಾಥುರ್ ಹೇಳಿದ್ದಾರೆ.
ಸಾಂಸ್ಥಿಕ ಸಿದ್ಧಾಂತ ಮತ್ತು ಸಾಂಸ್ಥಿಕ ನಡವಳಿಕೆ ಕ್ಷೇತ್ರದಲ್ಲಿ ಪ್ರವರ್ತಕರಾಗಿರುವ ರಾಬರ್ಟ್ ಒವೆನ್, ಜೇಮ್ಸ್ ಬರ್ನ್ಹ್ಯಾಮ್, ಮೇರಿ ಪಾರ್ಕರ್ ಫೊಲ್ಲೆಟ್ ಅವರ ಲೇಖನ ಅಧ್ಯಾಯಗಳ ಬದಲು ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ ಅವರ ತತ್ವಗಳು, ಧಾರ್ಮಿಕ ಗ್ರಾಂಥಗಳಾದ ರಾಮಾಯಣ, ಮಹಾಭಾರತ, ಗೀತೆಯನ್ನು ಸೇರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.