ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ೩೦ರ ಹರೆದ ಮಹಿಳೆಯ ಪ್ರಸವಕ್ಕೆ 60ರ ಭಿಕ್ಷುಕಿ ಸಹಕರಿಸಿದ ಘಟನೆ ನಡೆದಿದೆ.
ಮಾನ್ವಿಯ ಸನ್ನಾ ಬಜಾರ್ ನಿವಾಸಿ ರಾಮಣ್ಣ ಅವರ ಪತ್ನಿ ಯಲ್ಲಮ್ಮ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ರಕ್ತಹೀನತೆ ಕಂಡು ಬಂದ ಹಿನ್ನೆಲೆಯಲ್ಲಿ ರಾಯಚೂರು ವೈದ್ಯಕೀಯ ವಿಜ್ಞಾನ ಕೇಂದ್ರ (ರಿಮ್ಸ್)ಕ್ಕೆ ಭೇಟಿ ನೀಡುವಂತೆ ವೈದ್ಯರು ಸಲಹೆ ನೀಡಿದ್ದರು.
ರಿಮ್ಸ್ಗೆ ಭೇಟಿ ನೀಡಿ ಮರಳುವ ಸಂದರ್ಭ ಬಸ್ನಿಂದ ಇಳಿಯುತ್ತಿದ್ದಂತೆ ಯಲ್ಲಮ್ಮ ರಸ್ತೆಗೆ ಬಿದ್ದಿದ್ದು, ರಸ್ತಸ್ರಾವಕ್ಕೆ ಒಳಗಾಗಿದ್ದಾರೆ. ಇವರ ನೆರವಿಗೆ ಯಾರೂ ಬಾರದ ಸಂದರ್ಭ ಯಲ್ಲಮ್ಮನ ನೆರವಿಗೆ 60ರ ಭಿಕ್ಷುಕಿ ಧಾವಿಸಿದ್ದಾರೆ. ತಾಯಿ ಮತ್ತು ಮಗುವಿನ ರಕ್ಷಣೆಗೆ ಮುಂದಾದ ಭಿಕ್ಷುಕಿಗೆ ಹತ್ತಿದಲ್ಲಿದ್ದ ಇತರ ಮಹಿಳೆಯರು ಕೈಜೋಡಿಸಿದ್ದಾರೆ ಎನ್ನಲಾಗಿದೆ.
ಅನಂತರ ಜನಸಂದಣಿ ಹೆಚ್ಚಿದಂತೆ ಭಿಕ್ಷುಕಿ ಸ್ಥಳದಿಂದ ಕಣ್ಮರೆಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿದ ಮಾನ್ವಿ ಶಾಸಕ ಹಂಪಯ್ಯ ನಾಯಕ್ ಬೆಳ್ಳಟಗಿ, ಇದು ನಮ್ಮ ಪಟ್ಟಣದಲ್ಲಿ ಸಂಭವಿಸಿದ ಅವಿಸ್ಮರಣೀಯ ಘಟನೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಈ ಜನರು ಶ್ರೀಮಂತರಲ್ಲದೇ ಇರಬಹುದು. ಆದರೆ ಅವರು ಎಷ್ಟು ಹೃದಯವಂತರು ಎಂದು ತೋರಿಸಿ ಕೊಟ್ಟಿದ್ದಾರೆ. ಅಪರಿಚಿತರು ಸಹಾಯಕ್ಕೆ ಧಾವಿಸುವುದು ನಾವು ಸಾಮಾನ್ಯವಾಗಿ ಕೇಳಿರದ ವಿಷಯವಲ್ಲ. ಆದರೆ ಸಹಾಯಕ್ಕೆ ಮುಂದಾಗುವ ಒಳ್ಳೆಯ ಜನರೂ ಇದ್ದಾರೆ ಎಂದು ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.