ನವದೆಹಲಿ: ಇಂದು ಇಡೀ ದೇಶ ಬಣ್ಣಗಳಲ್ಲಿ ಮಿಂದೆದ್ದು, ಸಿಹಿ ಹಂಚಿ ಹೋಳಿಯನ್ನು ಆಚರಿಸುತ್ತಿದೆ. ಆದರೆ ದೇಶ ಕಾಯುವ ಸೈನಿಕರು ಮಾತ್ರ ಈ ಬಾರಿಯ ಹೋಳಿ ಸಂಭ್ರಮದಿಂದ ದೂರವುಳಿದಿದ್ದಾರೆ. ಇದಕ್ಕೆ ಕಾರಣ ಛತ್ತೀಸ್ಗಢದ ಸುಕ್ಮಾದಲ್ಲಿ ನಡೆದ 12 ಸಿಆರ್ಪಿಎಫ್ ಯೋಧರ ಮಾರಣಹೋಮ.
‘ಹೋಳಿ ಸಂಭ್ರಮಕ್ಕೆ ಸಂಬಂಧಪಟ್ಟ ಯಾವುದೇ ರೆಜಿಮೆಂಟಲ್ ಸಮಾರಂಭಗಳನ್ನು ಯಾವುದೇ ತುಕಡಿಗಳಲ್ಲೂ ಹಮ್ಮಿಕೊಳ್ಳುವಂತಿಲ್ಲ’ ಎಂದು ಸಿಆರ್ಪಿಎಫ್ ಆದೇಶವನ್ನು ಹೊರಡಿಸಿದೆ.
ಸಿಆರ್ಪಿಎಫ್ನ ಈ ನಿರ್ಧಾರಕ್ಕೆ ಜೊತೆಗೂಡಿರುವ ಸಿಐಎಸ್ಎಫ್, ಬಿಎಸ್ಎಫ್, ಎಸ್ಎಸ್ಬಿಗಳು ಕೂಡ ಬಣ್ಣಗಳ ಹಬ್ಬವನ್ನು ಆಚರಿಸುವುದಿಲ್ಲ ಎಂದು ಘೋಷಿಸಿವೆ. ಗೃಹಸಚಿವ ರಾಜನಾಥ್ ಸಿಂಗ್ ಅವರೂ ರಕ್ಷಣಾ ಪಡೆಗಳ ನಿರ್ಧಾರಕ್ಕೆ ಸಾಥ್ ನೀಡಿದ್ದು, ಹೋಳಿ ಸಂಭ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದಿದ್ದಾರೆ.
‘ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತದೆ. ಅವರ ಕುಟುಂಬದೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬುತ್ತೇವೆ’ ಎಂದು ಟ್ವಿಟ್ನಲ್ಲಿ ಸಿಆರ್ಪಿಎಫ್ ಹೇಳಿದೆ.
ಮಾ.11ರಂದು ಸುಕ್ಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ದಾಳಿ ಮಾಡಿದ ನಕ್ಸಲರು 12 ಯೋಧರನ್ನು ಕೊಂದು ಅವರ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.