ನವದೆಹಲಿ: ಸುಮಾರು 2,700 ಕಲ್ಯಾಣ ಯೋಜನೆಗಳನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಆರಂಭಿಸಲಿದ್ದು, ಇದರಲ್ಲಿ ನಗರದ ಬಡವರ ಬಾಡಿಗೆಯನ್ನು ವೋಚರ್ ಮೂಲಕ ಪಾವತಿ ಮಾಡುವ ಯೋಜನೆಯೂ ಇದೆ ಎನ್ನಲಾಗಿದೆ.
ಸರ್ಕಾರ ನಿರ್ಮಿಸಲಿರುವ 100 ಸ್ಮಾರ್ಟ್ ಸಿಟಿಗಳಲ್ಲಿ ಮಾತ್ರ ಈ ಯೋಜನೆ ಜಾರಿಗೆ ಬರಲಿದೆ. ಈ ಹಣಕಾಸು ವರ್ಷದಿಂದ ಈ ಯೋಜನೆ ಜಾರಿಗೆ ಬರುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಸರ್ಕಾರ ನೀಡುವ ವೋಚರ್ಗಳನ್ನು ಫಲಾನುಭವಿಗಳು ತಮ್ಮ ಮಾಲೀಕರಿಗೆ ನೀಡಬಹುದು, ಮಾಲೀಕರು ಈ ವೋಚರ್ಗಳನ್ನು ಯಾವುದೇ ಸಿಟಿಜನ್ ಸರ್ವಿಸ್ ಬ್ಯೂರೋಗೆ ನೀಡಿ ಹಣಪಡೆಯಬಹುದು.
ಬಾಡಿಗೆಯು ವೋಚರ್ ಮೌಲ್ಯಕ್ಕಿಂತ ಹೆಚ್ಚಾಗಿದ್ದ ಪಕ್ಷದಲ್ಲಿ ಬಾಡಿಗೆದಾರನೇ ಮಾಲೀಕನಿಗೆ ಉಳಿದ ಮೊತ್ತವನ್ನು ನಗದು ರೂಪದಲ್ಲಿ ನೀಡಬೇಕಾಗುತ್ತದೆ. ವೋಚರ್ ಮೌಲ್ಯವನ್ನು ಸ್ಥಳೀಯ ಆಡಳಿತಗಳು ನಿವಾಸದ ಗಾತ್ರ ಮತ್ತು ವರ್ಗವನ್ನು ಆಧರಿಸಿ ನಿರ್ಧರಿಸುತ್ತದೆ.
ಈ ವೋಚರ್ ಯೋಜನೆಯಲ್ಲಿ ನೇರ ಲಾಭ ವರ್ಗಾವಣೆಯ ಆಯ್ಕೆಯನ್ನೂ ತರಲು ಚಿಂತನೆ ನಡೆದಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.