ಕಾರವಾರ: ಸ್ವದೇಶಿ ನಿರ್ಮಿತ ವಾಟರ್ ಜೆಟ್ ಯುದ್ಧನೌಕೆ (Water Jet Fast Attack Craft) ತಿಲ್ಲಾಂಚಾಂಗ್ ಇಂದು ಐಎಎನ್ಎಸ್ ಕದಂಬದ ನೌಕಾನೆಲೆಯಲ್ಲಿ ಬಿಡುಗಡೆಗೊಂಡಿದೆ.
ಭಾರತದಲ್ಲಿ ಸದ್ಯ 10 ವಾಟರ್ ಜೆಟ್ ಯುದ್ಧನೌಕೆಗಳಿದ್ದು, ಅವುಗಳಲ್ಲಿ ಇಂದು ಬಿಡುಗಡೆಗೊಂಡ ನೌಕೆ ಸೇರಿದಂತೆ ಒಟ್ಟು 3 ಸ್ವದೇಶಿ ನಿರ್ಮಿತವಾಗಿವೆ.
ಕಡಲ ತೀರದ ಸುರಕ್ಷತೆ ದೃಷ್ಟಿಯಿಂದ ಇದು ಮಹತ್ವ ಹೊಂದಿದೆ. ನೌಕೆಯ ಕಮಾಂಡಿಂಗ್ ಅಧಿಕಾರಿಯಾಗಿ ಆದಿತ್ಯ ನಿಯೋಜನೆಗೊಂಡಿದ್ದು, ಅವರೊಂದಿಗೆ ೫೦ ಜನ ಸಿಬ್ಬಂದಿಗಳು ಇರಲಿದ್ದಾರೆ ಎಂದು ಪಶ್ಚಿಮ ನೌಕಾಪಡೆಯ ಅಧಿಕಾರಿ ಗಿರೀಶ್ ಲೂತ್ರಾ ಹೇಳಿದ್ದಾರೆ.
ತೀವ್ರ ವೇಗವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಈ ಯುದ್ಧ ನೌಕೆ, ಕಡಲ್ಗಳ್ಳತನ, ಸಾಗರ ಮಾರ್ಗದ ಭಯೋತ್ಪಾದನೆ ಹತ್ತಿಕ್ಕಲು ಸಹಕಾರಿಯಂತೆ.
ಗಂಟೆಗೆ 50 ಕಿ.ಮೀ.ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದ್ದು, ಇದರಲ್ಲಿ 12.7 ಎಂ.ಎಂ.ಹೆವಿ ಮಿಷನ್ ಗನ್ ಹೊಂದಿದೆ. ಹಾಗೆಯೇ 48.9 ಮೀಟರ್ ಉದ್ದವಿದ್ದು, 320 ಟನ್ ಭಾರ ಸಾಗಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.
ಸುದೀರ್ಘ ಸೇವೆ ಸಲ್ಲಿಸಿದ ಹಿರಿಮೆಗೆ ಪಾತ್ರವಾಗಿದ್ದ ಐಎನ್ಎಸ್ ವಿರಾಟ್ ವಿಮಾನ ವಾಹಕ ನೌಕೆ ಕಳೆದ ಫೆಬ್ರುವರಿಯಲ್ಲಿ ನಿವೃತ್ತಿ ಹೊಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.