ಸೋಮನಾಥ: ಮುಂದಿನ ೫ ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ತ್ರಿವೇಣಿ ಸಂಗಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಅವರು, 2022ರ ಒಳಗೆ ರೈತರ ಆದಾಯ ದ್ವಿಗುಣ ಮಾಡಲು ಸರ್ಕಾರ ಬಯಸಿದೆ. ಆದ್ದರಿಂದ ರೈತರು ಈ ಬಾರಿ ಉತ್ತಮ ಬೆಲೆ ಪಡೆಯಲು ಶೇಂಗಾ ರಫ್ತು ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ಕೇಸರಿ ಕ್ರಾಂತಿ ಆರಂಭಿಸುವ ಬಗ್ಗೆ ಭರವಸೆ ನೀಡಿದ ಪ್ರಧಾನಿ ಮೋದಿ, ವಿದ್ಯುತ್ ಮತ್ತು ಪವನಶಕ್ತಿ ಕ್ಷೇತ್ರದಲ್ಲಿ ಕೇಸರಿ ಕ್ರಾಂತಿ, ಕೃಷಿ, ಮಣ್ಣು ಪರೀಕ್ಷೆಯ ನ್ಯಾಯಾಂಗ ಬಳಕೆಯಲ್ಲಿ ಹಸಿರು ಕ್ರಾಂತಿ, ಹಾಲು ಮತ್ತು ಡೈರಿ ವಲಯ ಅಥವಾ ತಲಾ ಹಾಲು ಇಳುವರಿಯಲ್ಲಿ ಶ್ವೇತ ಕ್ರಾಂತಿ ನಡೆಯಬೇಕಿದೆ ಎಂದು ಹೇಳಿದ್ದಾರೆ.
ಕರಾವಳಿ ಪ್ರದೇಶ ಮತ್ತು ಮೀನುಗಾರಿಕೆ ವ್ಯಾಪಾರ ಅಭಿವೃದ್ಧಿಪಡಿಸಲಾಗುತ್ತಿದ್ದು, ಇದು ‘ನೀಲಿ ಕ್ರಾಂತಿ ಅಡಿಯಲ್ಲಿ ಬರಲಿದೆ ಎಂದು ಅವರು ಹಳಿದ್ದಾರೆ.
ಬಿಜೆಪಿ ಸರ್ಕಾರ ಬಡವರ ಕಾಳಜಿ ವಹಿಸುತ್ತಿದ್ದು, ಅವರಿಗಾಗಿ ಜನ್-ಧನ್ ಖಾತೆ ಮತ್ತು ರುಪೇ ಕಾರ್ಡ್ನ್ನು ಪರಿಚಯಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರು ಎರಡು ದಿನಗಳ ಗುಜರಾತ್ ಭೇಟಿಯ ಭಾಗವಾಗಿ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ನಂತರ ಸರ್ದಾರ್ ವಲ್ಲೌ ಭಾಯ್ ಪಟೇಲರ ಪ್ರತಿಮೆಗೆ ಗೌರವ ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.