ನವದೆಹಲಿ: ನಾಳೆ ವಿರಾಟ್ ನಿವೃತ್ತಿ, ಹಳೆಯ ಹಡಗು ಎಂದೂ ಮರಣ ಹೊಂದಲ್ಲ, ಅದರ ಸ್ಫೂರ್ತಿ ಚಿರಂತನ ಎಂಬರ್ಥದಲ್ಲಿ ಖ್ಯಾತ ಕ್ರಿಕೆಟರ್ ಸೆಹ್ವಾಗ್ ಮಾಡಿದ ಟ್ವೀಟ್ ಅದೆಷ್ಟೋ ಕ್ರಿಕೆಟ್ ಪ್ರೇಮಿಗಳ ಹೃದಯವನ್ನು ಕ್ಷಣ ದಂಗುಬಡಿಸಿದೆ.
Virat retires tomorrow. Old ships never die, their spirits live on.#INSViraat -serving Indian Navy for 30 yrs to be decommissioned tomorrow pic.twitter.com/8i9cNnsEC8
— Virender Sehwag (@virendersehwag) March 5, 2017
ನಗೆ ಸಿಂಚನ ಮೂಡಿಸುವ ಟ್ವೀಟ್ ಮಾಡುವುದರಲ್ಲಿ ಸೆಹ್ವಾಗ್ ಹೆಸರುವಾಸಿ. ಆದರೆ, ವಿರಾಟ್ ನಿವೃತ್ತಿ ಎಂಬ ಟ್ವೀಟ್ ನೋಡಿ, ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ಆದರೆ ಸೆಹ್ವಾಗ್ ಹೇಳಿದ್ದು ವಿರಾಟ್ ಕೊಹ್ಲಿ ಕುರಿತಲ್ಲ ಎಂಬುದು ಅವರ ಟ್ವೀಟ್ ಪೂರ್ಣ ಓದಿದಾಗ ತಿಳಿದು ಬಂದಿದೆ.
ನೌಕಾ ಸೇವೆಯಿಂದ ಇತ್ತೀಚೆಗೆ ಮುಕ್ತಗೊಂಡ ಐಎನ್ಎಸ್ ವಿರಾಟ್ ಬಗ್ಗೆ ಸೆಹ್ವಾಗ್ ಹೇಳಿದ್ದರು. ನೌಕಾ ಸೇನೆಯಲ್ಲಿ ಈ ಹಡಗು 30 ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು. ಪದಗಳೊಂದಿಗೆ ಆಟವಾಡಿದ ಸೆಹ್ವಾಗ್ ಅವರ ಫನ್ನಿ ಟ್ವೀಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.