ಮುಂಬಯಿ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದ ಮಹಾರಾಷ್ಟ್ರ ಅನಿಮಲ್ ಆಂಡ್ ಫಿಶರಿ ಸೈನ್ಸ್ ಯೂನಿವರ್ಸಿಟಿಯಿಂದ ‘ಡಾಕ್ಟರ್ ಆಫ್ ಸೈನ್ಸ್’ ಗೌರವ ಪದವಿ ಪಡೆಯಲಿದ್ದಾರೆ.
ದೇಶಿ ಗೋತಳಿಯ ಸಂರಕ್ಷಣೆಗೆ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಗೌರವ ಪದವಿಯನ್ನು ಅವರಿಗೆ ನೀಡಲಾಗುತ್ತಿದೆ. ಮಾ.9ರಂದು ಯೂನಿವರ್ಸಿಟಿಯ ೮ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುತ್ತಿದೆ.
’ಅಕಾಡಮಿ ಕೌನ್ಸಿಲ್ ಸೇರಿದಂತೆ ಎಲ್ಲಾ ಕಮಿಟಿಗಳ ಒಮ್ಮತದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೇಶಿ ಗೋ ತಳಿ ಸಂರಕ್ಷಣೆಯ ಅವರ ಪ್ರಯತ್ನದಿಂದ ಗ್ರಾಮೀಣ ಗೋ ಆರ್ಥಿಕತೆಗೆ ಉತ್ತೇಜನ ದೊರೆತಿದೆ, ಈ ಪದವಿ ಅವರ ಕೊಡುಗೆಗಳಿಗೆ ನೀಡುತ್ತಿರುವ ಗೌರವ’ ಎಂದ ಯೂನಿವರ್ಸಿಟಿ ಅಧಿಕಾರಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.