ನವದೆಹಲಿ: ನಗರಗಳ ನಡುವೆ ಹೈ-ಸ್ಪೀಡ್ ರಸ್ತೆ ನಿರ್ಮಿಸುವ ಹೈಪರ್ಲೂಪ್ ಒನ್, ಭಾರತದಲ್ಲಿ ಐದು ಸಂಭಾವ್ಯ ಹೈಪರ್ಲೂಪ್ ಮಾರ್ಗ ನಿರ್ಮಾಣಕ್ಕೆ ಸಾರ್ವಜನಿಕ ಮತ ಆರಂಭಿಸಿದೆ.
ತಮ್ಮ ದೇಶದಲ್ಲಿ ಸಮರ್ಥ ಸಾರಿಗೆ ಯೋಜನೆ ವಿವರ ಸಲ್ಲಿಸಲು ಹೈಪರ್ಲೂಪ್ ಒನ್ ಜಾಗತಿಕ ಸ್ಪರ್ಧೆಯಲ್ಲಿ ವಿಶ್ವದಾದ್ಯಂತ ತಂಡಗಳನ್ನು ಆಹ್ವಾನಿಸಲಾಗಿದ್ದು, ಭಾರತೀಯ ತಂಡಗಳು ೫ ಹೈ-ಸ್ಪೀಡ್ ಹೈಪರ್ಲೂಪ್ ಮಾರ್ಗಗಳ ಯೋಜನೆಯನ್ನು ರೂಪಿಸಿವೆ.
ಹೈಪರ್ಲೂಪ್ ಅಯಸ್ಕಾಂತೀಯ ತೇಲುವಿಕೆ ಪಾಡ್ಗಳ ಮೂಲಕ ಕಡಿಮೆ ಒತ್ತಡದ ಟ್ಯೂಬ್ಗಳ ಸಹಾಯದಿಂದ ಜನರು ಅಥವಾ ಸರಕುಗಳನ್ನು ಸಾಗಿಸುವ ತಂತ್ರಜ್ಞಾನವಾಗಿದೆ. ಇದನ್ನು ಮೊದಲ ಬಾರಿಗೆ ವಿದ್ಯುತ್ ಚಾಲಿತ ಕಾರ್ ತಯಾರಕ ಟೆಸ್ಲಾ ಕಂಪೆನಿಯ ಹಾಗೂ ವಾಣಿಜ್ಯ ಬಾಹ್ಯಾಕಾಶ ಕಂಪೆನಿ ಸ್ಪೇಸ್ಎಕ್ಸ್ ಪ್ರಸ್ತಾಪಿಸಿತ್ತು.
ಹೈಪರ್ಲೂಪ್ ಒನ್ ಜಾಗತಿಕ ಸ್ಪರ್ದೆಯಲ್ಲಿ ಜಗತ್ತಿನಾದ್ಯಂತ 90 ರಾಷ್ಟ್ರಗಳ 2600 ತಂಡಗಳು ನೋದಣಿ ಮಾಡಿದ್ದು, 35 ಸೆಮಿಫೈನಲಿಸ್ಟ್ಗಳನ್ನು ಆಯ್ಕೆ ಮಾಡಲಾಗಿದೆ.
ಭಾರತದ 5 ಸೆಮಿಫೈನಲಿಸ್ಟ್ ತಂಡಗಳ ಪ್ರಸ್ತಾಪಿತ ಮಾರ್ಗಗಳು ಇಂತಿವೆ:
AECOM -ಬೆಂಗಳೂರು-ಚೆನ್ನೈ ನಡುವೆ 20 ನಿಮಿಷಗಳಲ್ಲಿ ತಲುಪುವ 334 ಕಿ.ಮಿ. ಮಾರ್ಗ.
LUX Hyperloop Network – ಬೆಂಗಳೂರು-ತಿರುವನಂತಪುರಂ ನಡುವೆ 41 ನಿಮಿಷಗಳಲ್ಲಿ ತಲುಪುವ 736 ಕಿ. ಮೀ. ಮಾರ್ಗ. ಇದು ಕೊಯಮತ್ತೂರು ಹಾಗೂ ಕೊಚಿ ಬಂದರುಗಳನ್ನು ಸಂಪರ್ಕಿಸಲಿದೆ.
Dinclix GroundWorks- ಜೈಪುರ, ಇಂಡೋರ್ ಮೂಲಕ ದೆಹಲಿ-ಮುಂಬಯಿ ನಡುವೆ 55 ನಿಮಿಷಗಳಲ್ಲಿ ತಲುಪುವ 1,137 ಕಿ.ಮೀ. ಮಾರ್ಗ.
Hyperloop India- ಬೆಂಗಳೂರು ಮೂಲಕ ಮುಂಬಯಿ-ಚೆನ್ನೈ ನಡುವೆ 50 ನಿಮಿಷಗಳಲ್ಲಿ ಪ್ರಯಾಣಿಸುವ 1,102 ಕಿ.ಮೀ. ಮಾರ್ಗ.
Infy Alpha-ಬೆಂಗಳೂರು-ಚೆನ್ನೈ ನಡುವೆ 20 ನಿಮಿಷಗಳಲ್ಲಿ ತಲುಪುವ 334 ಕಿ.ಮಿ. ಮಾರ್ಗ.
ಹೈಪರ್ಲೂಪ್ ಒನ್ ಪ್ರಸ್ತುತ ಅಬುಧಾಬಿ ಮತ್ತು ದುಬೈ ನಡುವೆ ಹೈಪರ್ಲೂಪ್ ಅಭಿವೃದ್ಧಿಪಡಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.