ವಿಶ್ವಸಂಸ್ಥೆ: ರೋಗಗಳಿಗೆ ಇಲಿಜ್ವರ, ಹಂದಿಜ್ವರ, ಹಕ್ಕಿ ಜ್ವರ ಎಂಬಿತ್ಯಾದಿ ಪ್ರಾಣಿಗಳ, ಸ್ಥಳಗಳ ಅಥವಾ ಮನುಷ್ಯರ ಹೆಸರುಗಳನ್ನು ಇಡದಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚನೆ ನೀಡಿದೆ.
ಸ್ಪಾನಿಶ್ ಫ್ಲೂ, ರಿಫ್ಟ್ ವ್ಯಾಲಿ ಫಿವರ್, ವೆಸ್ಟ್ ನೈಲ್ ವೈರಸ್, ಲೈಮ್ ಡಿಸೀಸ್, ಎಬೋಲಾ ಮುಂತಾದ ಊರುಗಳ ಹೆಸರುಗಳನ್ನೂ ರೋಗಗಳಿಗೆ ಇಡಲಾಗಿದೆ. ಅಲ್ಲದೇ ಚಗಸ್, ಅಲ್ಝಮೀರ್ ಮುಂತಾದ ಮನುಷ್ಯರ ಹೆಸರುಗಳ ರೋಗಗಳು ಇದೆ. ಈ ರೀತಿಯ ಹೆಸರುಗಳನ್ನು ಯಾವುದೇ ಕಾರಣಕ್ಕೂ ರೋಗಗಳಿಗೆ ಇಡಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಅಲ್ಲದೇ ಆಡಳಿತಗಾರರು, ವಿಜ್ಞಾನಿಗಳು ಮತ್ತು ಮಾಧ್ಯಮಗಳು ಶಿಫಾರಸ್ಸು ಪಡೆದ ಬಳಿಕವಷ್ಟೇ ರೋಗಗಳನ್ನು ಹೆಸರಿಸಬೇಕು ಎಂದು ಅದು ಸೂಚನೆ ನೀಡಿದೆ.
ವಾಟರ್ ಡಯೇರಿಯಾ, ಉಸಿರಾಟದ ರೋಗ ಹೀಗೆ ರೋಗದ ಗುಣಲಕ್ಷಣಗಳನ್ನು ಆಧರಿಸಿ ವಿವರಣಾತ್ಮಕ ಹೆಸರುಗಳನ್ನು ರೋಗಗಳಿಗೆ ಇಡಬೇಕು ಅಥವಾ ರೋಗ ಬರುವ ವಾತಾವರಣ(ಚಳಿ, ಬೇಸಿಗೆ)ಕ್ಕೆ ಅನುಗುಣವಾಗಿ ಹೆಸರಿಡಬಹುದು ಎಂದು ಅದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.