ಆಕ್ಲೆಂಡ್: ಸಾವಿರಾರು ಅಡಿ ಎತ್ತರದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಸುವಾಗ ಅಸ್ವಸ್ಥತೆ ಎದುರಾಗುವುದನ್ನು ಯಾರೂ ಬಯಸುವುದಿಲ್ಲ. ಆದರೆ ನೀವು ಪ್ರಯಾಣಿಸುವ ವಿಮಾನದಲ್ಲಿ ಒಬ್ಬ ಡಾಕ್ಟರ್ ಇದ್ದರೆ ನಿಮಗೆಷ್ಟು ಅನುಕೂಲವಾಗಬಹುದು ಅಲ್ಲವೇ.
ನ್ಯೂಜಿಲ್ಯಾಂಡ್ನ ಆಕ್ಲೆಂಡ್ನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ ವಿಮಾನದಲ್ಲಿದ್ದ ವೈದ್ಯರ ನೆರವು ಪಡೆಯಬೇಕಾದ ಘಟನೆ ಸಂಭವಿಸಿದೆ.
ಭಾರತೀಯ ಮೂಲದ ಡಾ. ಅಂಚಿತಾ ಪಾಂಡೋಹ್ ಹಾಗೂ ಅವರ ಪತಿ ಸೌರಭ್ ಕುಮಾರ್ ಓರ್ವ ಗಗನಸಖಿ ಆಮ್ಲಜನಕದ ಸಿಲಿಂಡರ್ ಕೊಂಡೊಯ್ಯುತ್ತಿವುದನ್ನು ಗಮನಿಸಿದ್ದಾರೆ. ಈ ಸಂದರ್ಭ ವಿಮಾನದ ಕ್ಯಾಪ್ಟನ್ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಲ್ಲಿ ಚಿಕಿತ್ಸೆಗೆ ಸಹಾಯ ಮಾಡಲು ಮುಂದಾಗುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಡಾ. ಆಂಚನ್ ಮುಂದಿನ ಕಂಪಾರ್ಟ್ಮೆಂಟ್ಗೆ ತೆರಳಿ ಅಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಗಗನಸಖಿಗೆ ತುರ್ತು ಚಿಕಿತ್ಸೆಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನದಲ್ಲಿದ್ದ ತುರ್ತು ಚಿಕಿತ್ಸಾ ಉಪಕರಣಗಳನ್ನು ಡಾ. ಆಂಚನ್ ಅವರಿಗೆ ಒದಗಿಸಲಾಗಿದ್ದು, ಡಾ. ಆಂಚನ್ ಆಕೆಯನ್ನು ರಕ್ಷಿಸಿದ್ದಾರೆ.
ವಿಮಾನ ತುರ್ತು ಭೂಸ್ಪರ್ಶ ಮಾಡಲು ಆಕ್ಲೆಂಡ್ಗೆ ಮರಳಲು 1 ತಾಸು ಅಥವಾ ಸಮೀಪದ ಆಸ್ಟ್ರೇಲಿಯಾಗೆ ತಲುಪಲು 2 ತಾಸು ಬೇಕಾಗಿದ್ದ ಕಾರಣ ವಿಮಾನದಲ್ಲೇ ಚಿಕಿತ್ಸೆ ನೀಡುವುದು ಅನಿವಾರ್ಯವಾಗಿತ್ತು ಎಂದು ಸೌರಭ್ ಕುಮಾರ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.