ಪಿತೋರಗಢ್: ಉತ್ತರಾಖಂಡದ ಪಿತೋರಗಢ ಪ್ರದೇಶದಲ್ಲಿ ಮಂಗಳವಾರ ಭಾರತ ಮತ್ತು ನೇಪಾಳದ ನಡುವೆ ‘ಸೂರ್ಯ ಕಿರಣ್-Xi’ ಜಂಟಿ ಸಮರಾಭ್ಯಾಸ ಆರಂಭಗೊಂಡಿದೆ.
ಇದು ಉಭಯ ದೇಶಗಳ ಸೇನೆಗಳ ನಡುವಣ ಬ್ಯಾಟಲಿಯನ್ ಹಂತದ ಜಂಟಿ ಸಮರಾಭ್ಯಾಸವಾಗಿದೆ.
ಎರಡು ವಾರಗಳ ಕಾಲ ನಡೆಯುವ ಸಮರಾಭ್ಯಾಸ ಇದಾಗಿದ್ದು, ದಂಗೆಗಳ ವಿರುದ್ಧ ಸಮರ್ಥ ಕಾರ್ಯಾಚರಣೆ ನಡೆಸುವ ತರಬೇತಿಯನ್ನು ಪಡೆಯುವ ಉದ್ದೇಶದಿಂದ ಈ ಸಮರಾಭ್ಯಾಸವನ್ನು ಆರಂಭಿಸಲಾಗಿದೆ.
ಅಲ್ಲದೇ ಮಾನವೀಯ ನೆರವು, ವಿಪತ್ತು ಪರಿಹಾರ ಕಾರ್ಯಾಚರಣೆ ಮತ್ತು ಪರಿಸರ ಸಂರಕ್ಷಣೆಗಳ ಬಗ್ಗೆಯೂ ಈ ಸಮರಾಭ್ಯಾಸ ಗಮನ ಕೇಂದ್ರೀಕರಿಸಲಿದೆ.
ಸೂರ್ಯ ಕಿರಣ್ ಸರಣಿ ಸಮರಭ್ಯಾಸವಾಗಿದ್ದು, ನೇಪಾಳ, ಭಾರತಗಳಲ್ಲಿ ನಡೆಸಲಾಗುತ್ತ ಬರಲಾಗುತ್ತಿದೆ. ಇದರಿಂದ ಎರಡೂ ದೇಶಗಳು ಸಮಾನ ಪ್ರಯೋಜನಗಳನ್ನು ಪಡೆದುಕೊಳ್ಳುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.