ಮುಂಬಯಿ: ಸ್ಥಳೀಯವಾಗಿ ತಯಾರಿಸಿದ ಚಿಲ್ಲರೆ ಮತ್ತು ಜೀವನಶೈಲಿ ಉತ್ಪನ್ನಗಳ ರಫ್ತು ಬೆಳವಣಿಗೆಯಲ್ಲಿ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ವಿಶ್ವದ 7ನೇ ಅತಿ ದೊಡ್ಡ ಸರಕು ರಫ್ತು ಕಂಪೆನಿ ‘ಡ್ಯಾಮ್ಕೊ’ ತಿಳಿಸಿದೆ.
ಡ್ಯಾನಿಶ್ ಹಡಗು ಸಂಘಟಿತ ಸರಕು ಸಾಗಣೆ ಕಂಪೆನಿ ಎಪಿ ಮೊಲ್ಲರ್-ಮೀಯರ್ಸ್ ಗ್ರೂಪ್ನ ಮೂಲ ಡಾಟಾ ವಿಶ್ಲೇಷಣೆ ಪ್ರಕಾರ ಹೆಚ್ಚಿನ ಬೆಳವಣಿಗೆ ಕಾಣದ ಜಾಗತಿಕ ಆರ್ಥಿಕ ಪರಿಸ್ಥಿತಿಗಳ ಮಧ್ಯೆ ಈ ಉತ್ಪನ್ನಗಳ ಭಾರತದ ರಫ್ತು ಸಂಯುಕ್ತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್) ಶೇ.10ರಷ್ಟು ಏರಿಕೆಯಾಗಿದೆ. ಇದೇ ವೇಳೆ ರಫ್ತಿನಲ್ಲಿ ಅತಿ ದೊಡ್ಡ ನೆಲೆ ಹೊಂದಿರುವ ಚೀನಾದ ಬೆಳವಣಿಗೆ ಕೇವಲ ಶೇ.5ರಷ್ಟು ಇದೆ.
ಕ್ಷೀಣಿಸುತ್ತಿರುವ ಜಾಗತಿಕ ವ್ಯಾಪಾರದ ನಡುವೆ ಭಾರತದ ಭವಿಷ್ಯ ಉಜ್ವಲವಾಗಿದೆ ಎಂದು ಡ್ಯಾಮ್ಕೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ಲಾಸ್ ರೂಡ್ ಸೆಜ್ಲಿಂಗ್ ಹೇಳಿದ್ದಾರೆ.
ಹಾಸಿಗೆ, ಸ್ನಾನದ ಉತ್ಪನ್ನ, ಹೋಂ ಡೆಕಾರ್, ಮತ್ತು ಜವಳಿ ರಫ್ತು ಶೇ.53ರಷ್ಟಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.