ವರದಕ್ಷಿಣೆಯ ಪಿಡುಗನ್ನು ಕಿತ್ತೊಗೆಯಲು ದೇಶದಲ್ಲಿ ಹಲವಾರು ಪ್ರಯತ್ನಗಳು ನಡೆಯುತ್ತಿದೆ, ಕಠಿಣ ಕಾನೂನನ್ನು ತರಲಾಗಿದೆ. ಆದರೂ ವರದಕ್ಷಿಣೆ ಜೀವಂತವಾಗಿದ್ದು ಹೆಣ್ಣು ಹೆತ್ತ ಬಡ ಪೋಷಕರನ್ನು ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿದೆ.
ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಇಡೀ ಪ್ರದೇಶದಲ್ಲಿ ವರದಕ್ಷಿಣೆಯೆಂಬ ಪೆಡಂಭೂತವನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಿ ಬಡವರ ಪಾಲಿನ ಹೀರೋ ಆಗಿ ಮಿಂಚಿದ್ದಾರೆ.
ಜಾರ್ಖಾಂಡ್ನ ಲತೆಹಾರ್ ಜಿಲ್ಲೆಯ ಪೊಖರಿ ಗ್ರಾಮದ ಹಾಜಿ ಮುಮ್ತಾಜ್ ಅಲಿ ವರದಕ್ಷಿಣೆಯ ವಿರುದ್ಧ ಸುಧೀರ್ಘ ಸಮಯದಿಂದ ಹೋರಾಟವನ್ನು ನಡೆಸುತ್ತಾ ಬಂದಿದ್ದಾರೆ. ವರದಕ್ಷಿಣೆ ವಿರುದ್ಧದ ಚಳುವಳಿಯ ನಾಯಕತ್ವವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವ ಇವರು ತನ್ನ ಪ್ರದೇಶದಲ್ಲಿ, ತನ್ನ ಸಮುದಾಯದಲ್ಲಿ ವರದಕ್ಷಿಣೆ ಪದ್ಧತಿ ನಾಶವಾಗುವಂತೆ ಮಾಡಿದ್ದಾರೆ.
ಇವರ ಅಭಿಯಾನದ ಫಲವಾಗಿ 800 ಕುಟುಂಬಗಳು ಸ್ವತಃ ಮುಂದೆ ಬಂದು ತಾವು ವರದಕ್ಷಿಣೆ ಸ್ವೀಕರಿಸಿರುವುದನ್ನು ಒಪ್ಪಿಕೊಂಡಿವೆ, ಮಾತ್ರವಲ್ಲ ವರದಕ್ಷಿಣೆ ರೂಪದಲ್ಲಿ ಪಡೆದ ಹಣವನ್ನು ವಧುವಿನ ಮನೆಯವರಿಗೆ ವಾಪಾಸ್ ಮಾಡಿವೆ.
2016ರ ಎಪ್ರಿಲ್ನಲ್ಲಿ ಇವರು ಅಭಿಯಾನ ಆರಂಭಿಸಿದ್ದು, ತನ್ನ ಸಮುದಾಯದ ಹಿರಿಯರನ್ನು ಭೇಟಿಯಾಗಿ ವರದಕ್ಷಿಣೆ ಪಡೆಯದಂತೆ ಹಾಗೂ ಕೊಡದಂತೆ ಸಂದೇಶ ನೀಡಿದ್ದಾರೆ. ಇವರ ಪ್ರಯತ್ನದಿಂದ ಮೌಲ್ವಿಗಳು ಕೂಡ ವರದಕ್ಷಿಣೆ ಪಡೆವ ಕುಟುಂಬಗಳ ಮದುವೆಯನ್ನು ನೆರವೇರಿಸುವುದಿಲ್ಲ ಎಂಬ ಶಪಥ ಮಾಡಿದ್ದಾರೆ.
ವರದಕ್ಷಿಣೆ ಎಂಬುದು ಕ್ಯಾನ್ಸರ್ ಇದ್ದಂತೆ, ಅದು ಬಡವರ ಮನೆಯನ್ನು ಸಂಪೂರ್ಣ ನುಂಗಿ ಬಿಡುತ್ತದೆ. ಈಗ ನಮ್ಮ ಅಭಿಯಾನದಿಂದಾಗಿ ಈ ಭಾಗದಲ್ಲಿ ವರದಕ್ಷಿಣೆ ತೊಳಗಿದೆ ಎಂದು ಹಾಝಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.