ಗುವಾಹಟಿ: ಈಶಾನ್ಯ ಭಾರತದ ಒಲಿಂಪಿಕ್ ವಿಜೇತರು ಹಾಗೂ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರದ ಗೃಹ ವ್ಯವಹಾರಗಳ ಸಚಿವಾಲಯ ಹಾಗೂ ಈಶಾನ್ಯ ಪ್ರದೇಶ ಅಭಿವೃದ್ಧಿ ಸಚಿವಾಲಯ ಸನ್ಮಾನ ಮಾಡಿದೆ.
ಈ ಸಂದರ್ಭ ಕ್ರೀಡಾಪಟುಗಳಾದ ದೀಪಾ ಕರ್ಮಾಕರ್ (ಜಿಮ್ನಾಸ್ಟ್), ಪಿ ಸೂಶೀಲಾ ಚಾನು (ಮಹಿಳಾ ಹಾಕಿ), ಎಲ್. ಬೊಂಬೈಲಾ ದೇವಿ (ಬಿಲ್ಲುಗಾರಿಕೆ), ಎಚ್. ಲಾಲ್ ರುತ್ಫೇಲಿ (ಪುರುಷರ ಹಾಕಿ) ಹಾಗೂ ಶೈಖೋಮ್ ಮೀರಾಬಾಯಿ ಚಾನು (ವೇಟ್ಲಿಂಫ್ಟಿಂಗ್) ಅವರಿಗೆ ತಲಾ ೨ ಲಕ್ಷ ರೂ. ಹಾಗೂ ಫಲಕ ನೀಡಿ ಗೌರವಿಸಲಾಯಿತು.
ಗೃಹ ಸಚಿವಾಲಯಗಳ ಕೇಂದ್ರ ಸಚಿವ ಕಿರನ್ ರಿಜಿಜು ಕ್ರೀಡಾಪಟುಗಳಿಗೆ ಶುಭಾಶಯ ಕೋರಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.