ನವದೆಹಲಿ: ಮ್ಯಾನ್ಮಾರ್ನಲ್ಲಿ ಕಳೆದ ವರ್ಷ ನಡೆದ ಕೋಮು ಗಲಭೆಯ ಸೇಡು ತೀರಿಸಿಕೊಳ್ಳಲು ರೋಹಿಂಗ್ಯ ಗುಂಪಿನ ನಿರಾಶ್ರಿತರಿಗೆ ಲಷ್ಕರ್-ಎ-ತೋಯ್ಬಾ (ಎಲ್ಇಟಿ) ಮೊದಲಾದ ಭಯೋತ್ಪಾದಕ ಸಂಘಟನೆಗಳು ಪ್ರಚೋದನೆ ನೀಡುತ್ತಿವೆ ಎಂದು ಬಾಂಗ್ಲಾದೇಶ ಸರ್ಕಾರ ಖಚಿತಪಡಿಸಿದೆ.
ಬಿಹಾರದ ಗಯಾದಲ್ಲಿರುವ ಮಹಾಬೋಧಿ ದೇವಾಲಯದಲ್ಲಿ ಜುಲೈ 7ರಂದು ಸಂಭವಿಸಿದ ಬಾಂಬ್ ಸ್ಫೋಟದ ಕುರಿತು ಭಾರತ ಮತ್ತು ಬಾಂಗ್ಲಾದೇಶದ ಇಸ್ಲಾಮಿಕ್ ಗುಂಪುಗಳ ವಿರುದ್ಧ ಭಾರತೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿರುವುದುದರ ಮೇಲೆ ಇದು ಕೇಂದ್ರೀಕೃತವಾಗಿದೆ.
ರೋಹಿಂಗ್ಯ ಗುಂಪು ಮ್ಯಾನ್ಮಾರ್ನ ಅಲ್ಪಸಂಖ್ಯಾತ ಮುಸ್ಲಿಮರಾಗಿದ್ದು, ಹೆಚ್ಚಾಗಿ ಅಕರನ್ ಪ್ರಾಂತ್ಯದ ಕರಾವಳಿ ಪ್ರದೇಶದಲ್ಲಿ ನೆಲೆಸಿದ್ದಾರೆ. ಮ್ಯಾನ್ಮಾರ್ನಲ್ಲಿ ಪ್ರಬಲ ಬೌಧ ಅನುಯಾಯಿಗಳು ಹಾಗೂ ರೋಹಿಗ್ಯ ನಡುವೆ ಕಳೆದ ಎರಡು ವರ್ಷಗಳಿಂದ ಕೋಮು ಗಲಭೆ ನಡೆಯುತ್ತಿದೆ.
ಎಲ್ಇಟಿ ಹಾಗೂ ಇತರ ಸಂಘಟನೆಗಳು ಭಾರತ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ವಿರುದ್ಧ ಸೇಡು ತೀರಿಸಿಕೊಳ್ಳುವ ನಿಟ್ಟಿನಲ್ಲಿ ರೋಹಿಂಗ್ಯಗಳಿಗೆ ಸಹಾಯ ಮಾಡುವ ಭರವಸೆ ನೀಡಿದ್ದು, ಭಾರತದ ವಿರುದ್ಧ ಯುದ್ಧಕ್ಕಾಗಿ ತರಬೇತಿ ನೀಡಲು ಆಹ್ವಾನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಇಟಿ ಮುಖಂಡ ಹಫೀಸ್ ಸಯೀದ್ ಜೂನ್ ೧ರಂದು ಲಾಹೋರ್ನಲ್ಲಿ ರೋಹಿಂಗ್ಯಗಳ ಶೋಷಣೆಯಲ್ಲಿ ಮ್ಯಾನ್ಮಾರ್ ಆಡಳಿತಕ್ಕೆ ಭಾರತ ಸಹಾಯ ಮಾಡುತ್ತಿದೆ ಎಂದು ಹೇಳಿಕೆ ನೀಡಿದ್ದು, ಭಾರತೀಯರ ಹುಬ್ಬೇರಿಸುವಂತೆ ಮಾಡಿದೆ. ಇನ್ನು ಎಲ್ಇಟಿ ಭಯೋತ್ಪಾದನಾ ಚಟುವಟಿಕೆಗಳ ಮೂಲಕ ಬೌದ್ಧರ ವಿರುದ್ಧ ಸೇಡು ತೀರಿಸಿಕೊಳ್ಳಲು ರೋಹಿಗ್ಯಗಳನ್ನು ನೇಮಕ ಮಾಡಿ ಸಹಾಯ ಮಾಡುತ್ತಿದೆ ಎಂದು ನಂಬಲಾಗಿದೆ.
ಬಾಂಗ್ಲಾದೇಶ ಸರ್ಕಾರದ ಪ್ರಕಾರ, ಜಮಾತ್-ಉಲ್-ಅರಕಾನ್ ಮತ್ತು ರೋಹಿಂಗ್ಯ ಐಕ್ಯಮತ ಸಂಸ್ಥೆ ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯ ಬಂದರ್ಬನ್ ಜಿಲ್ಲೆಯಲ್ಲಿ ಭಯೋತ್ಫಾದಕ ತರಬೇತಿ ಶಿಬಿರಗಳನ್ನು ನಡೆಸುತ್ತಿದೆ ಎಂದು ತಿಳಿಸಿದೆ. ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿ ಹೊಸ ಜಿಹಾದ್ ಕೇಂದ್ರವಾಗುತ್ತಿದ್ದು, ಅಮೇರಿಕಾ ಹಾಗೂ ಇತರ ದೇಶಗಳು ಇದರ ಮೇಲ್ವಿಚಾರಣೆ ನಡೆಸುತ್ತಿವೆ.
ಭಾರತದ ದೆಹಲಿ, ಗುರ್ಗಾಂವ್ಗಳಲ್ಲಿ ಅಂದಾಜು 5000 ರೋಹಿಂಗ್ಯಗಳು ವಾಸಿಸುತಿದ್ದು, ಇವರು ದೆಹಲಿಯ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮುಂದೆ ಯುಎನ್ ನಿರಾಶ್ರಿತರ ಸ್ಥಾನಮಾನದ ಬಗ್ಗೆ ಪ್ರತಿಭಟನೆ ನಡೆಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.