ನವದೆಹಲಿ: ಇನ್ನೆರಡು ದಶಕದಲ್ಲಿ ಭಾರತ ವಿಶ್ವದ ಅತಿದೊಡ್ಡ ಮುಸ್ಲಿಂ ರಾಷ್ಟ್ರವಾಗಲಿದೆಯಂತೆ. ಹೀಗೆಂದು ಅಮೆರಿಕದ ಪಿಇಡಬ್ಲ್ಯು ಸಂಶೋಧನಾ ವರದಿ ಹೇಳಿದೆ.
ವಿಶ್ವದ ವಿವಿಧ ಧರ್ಮಗಳ ಜನಸಂಖ್ಯೆಯ ಬೆಳವಣಿಗೆ ಕುರಿತು ಸಮೀಕ್ಷೆ ಮಾಡಿ ಪಿಇಡಬ್ಲ್ಯು ವರದಿ ಸಿದ್ಧಪಡಿಸಿದ್ದು, ಸದ್ಯ ಕ್ರಿಶ್ಚಿಯನ್ರು ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಆದರೆ ಜನಸಂಖ್ಯೆ ಬೆಳವಣಿಗೆ ವೇಗದಲ್ಲಿ ಮುಸ್ಲಿಂರೇ ಮುಂಚೂಣಿಯಲ್ಲಿದ್ದಾರೆ ಎಂದು ವರದಿ ಸ್ಪಷ್ಟಪಡಿಸಿದೆ.
ಮುಸ್ಲಿಂರ ಜನಸಂಖ್ಯೆ ಇದೇ ರೀತಿ ವೃದ್ಧಿಸುತ್ತ ಹೋಗಿದ್ದೇ ಆದಲ್ಲಿ, ಭಾರತದ ಜನಸಂಖ್ಯೆಯಲ್ಲಿ ಅವರ ಪಾಲೇ ಹೆಚ್ಚಿರುತ್ತದೆ. ವಿಶ್ವ ಜನಸಂಖ್ಯೆಯಲ್ಲೂ ಎರಡನೇ ಸ್ಥಾನದಲ್ಲಿರುವ ಮುಸ್ಲಿಂ ಸಮುದಾಯ, 2070ರ ವೇಳೆಗೆ ಮೊದಲ ಸ್ಥಾನಕ್ಕೆ ನೆಗೆಯಬಲ್ಲದು ಎನ್ನಲಾಗಿದೆ.
2050 ರ ವೇಳೆಗೆ ಭಾರತದಲ್ಲಿರುವ ಮುಸ್ಲಿಂರ ಸಂಖ್ಯೆ 30 ಕೋಟಿ ಹೆಚ್ಚಾಗಲಿದೆಯಂತೆ. 2010 ರಲ್ಲಿ ಮುಸ್ಲಿಮರು 160 ಕೋಟಿ, ಕ್ರೈಸ್ತರು 217 ಕೋಟಿ ಇದ್ದರಂತೆ. 2050 ರ ವೇಳೆಗೆ 280 ಕೋಟಿಗೆ ಮುಸ್ಲಿಮರು ಏರಿಕೆ ಕಂಡರೆ, ಕ್ರೈಸ್ತರು 292 ಕೋಟಿ ಆಗಲಿದ್ದಾರೆಂದು ಪಿಡಬ್ಲ್ಯುಇ ವರದಿ ಹೇಳಿದೆ.
ಭಾರತದಲ್ಲಿಯಂತೂ ಅಲ್ಪಸಂಖ್ಯಾತರೆಂದು ಗುರುತಿಸಿಕೊಂಡವರು ಬಹುಸಂಖ್ಯಾತರೆಂದು ಗುರುತಿಸಿಕೊಳ್ಳುವ ದಿನ ವರದಿಯನ್ವಯ ಬಹು ದೂರವೇನಿಲ್ಲ. ಸದ್ಯ ಇಂಡೋನೇಷಿಯಾದಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದು, ಭಾರತ ಅದಕ್ಕೆ ಸೆಡ್ಡು ಹೊಡೆಯಲು ಸಿದ್ಧವಾಗಿದೆ ಎನ್ನಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.