ನವದೆಹಲಿ; ಪ್ರತಿವರ್ಷ ಮಾರ್ಚ್ 3ರಂದು ವಿಶ್ವ ವನ್ಯಜೀವಿ ದಿನವನ್ನು ಆಚರಿಸಲಾಗುತ್ತದೆ. ಪ್ರಾಣಿಗಳು ಮತ್ತು ಭೂಮಿಯನ್ನು ಸಿಂಗರಿಸಿರುವ ಸಸ್ಯಗಳ ಬಗ್ಗೆ ಜಾಗೃತಿ ಮೂಡಿಸುವುದೇ ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶ.
ಈ ವರ್ಷ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಅಮೂಲ್ಯವೆನಿಸಿದ ಹಲವಾರು ವನ್ಯಜೀವಿಗಳು ಪ್ರಾಣತೆತ್ತಿವೆ. ಅವುಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಈ ದಿನ ಸ್ಮರಿಸಲಾಗುತ್ತಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ವನ್ಯಜೀವಿಗಳು ದುರ್ಘಟನೆಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ಪ್ರಯತ್ನಗಳೂ ನಡೆಯುತ್ತಿವೆ.
2013ರಲ್ಲಿ ವಿಶ್ವಸಂಸ್ಥೆಯು ವಿಶ್ವ ವನ್ಯಜೀವಿ ದಿನವನ್ನು ಮಾರ್ಚ್ 3ರಂದು ಆಚರಿಸುವ ತೀರ್ಮಾಣವನ್ನು ಕೈಗೊಂಡಿತು. ಅಲ್ಲಿಂದ ಪ್ರತಿವರ್ಷ ಹೊಸ ಥೀಮ್ನೊಂದಿಗೆ ಈ ದಿನವನ್ನು ಆಚರಿಸಲಾಗುತ್ತಿದೆ. ‘ಯುವಧ್ವನಿಗಳನ್ನು ಆಲಿಸಿರಿ’ ಎಂಬ ಥೀಮ್ನೊಂದಿಗೆ ವಿಶ್ವ ವನ್ಯಜೀವ ದಿನ 2017ನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ವಿಶ್ವದ ಬಹುತೇಕ ಜನಸಂಖ್ಯೆ 10ರಿಂದ 24ರ ವಯೋಮಿತಿಯದಾಗಿದ್ದು, ಈ ಯುವ ಸಮೂಹವೇ ಭವಿಷ್ಯದ ನಾಯಕತ್ವ ಹಾಗೂ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಹೀಗಾಗಿ ವನ್ಯಜೀವಿಗಳನ್ನು ಜಾಗತಿಕ ಮಟ್ಟದಲ್ಲಿ ಸಂರಕ್ಷಿಸುವಂತೆ ಈ ಯುವ ಸಮೂದಾಯವನ್ನು ಪ್ರೇರೇಪಿಸುವ ಅಗತ್ಯತೆ ಇದೆ. ಆ ದೃಷ್ಟಿಯಿಂದ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯ ವನ್ಯಜೀವಿ ದಿನವನ್ನು ಆಚರಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.