ನವದೆಹಲಿ: ನಷ್ಟದಲ್ಲಿರುವ ಭಾರತೀಯ ರೈಲ್ವೇ ಲಾಭದ ಹಳಿಗೆ ಮರಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆಧುನಿಕತೆಯನ್ನು ಅಳವಡಿಸಿಕೊಂಡು, ಪ್ರಯಾಣಿಕ ಸ್ನೇಹಿಯಾಗಿ ಜನರಿಗೆ ಹತ್ತಿರವಾಗುವುದು ಮಾತ್ರವಲ್ಲದೇ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಅದು ಹೊಂದಿದೆ.
ಪ್ರಯಾಣ ದರ, ಸರಕು ಸಾಗಾಣೆಯಿಂದ ಪ್ರಾಥಮಿಕವಾಗಿ ರೈಲ್ವೇ ಆದಾಯ ಗಳಿಸುತ್ತದೆ. ಇದನ್ನು ಸುಂಕದ ಗಳಿಕೆ ಎನ್ನಲಾಗುತ್ತದೆ. ಇದನ್ನು ಹೊರತುಪಡಿಸಿ ರೈಲ್ವೇ ಗಳಿಸುವ ಇತರ ಆದಾಯವನ್ನು ಶುಲ್ಕ ರಹಿತ ಗಳಿಕೆ ಎನ್ನಲಾಗುತ್ತದೆ. ವ್ಯವಸ್ಥಿತವಾಗಿ ಯೋಜನೆ ರೂಪಿಸಿದರೆ ಈ ಶುಲ್ಕ ರಹಿತ ಗಳಿಕೆಗೆ ಹೆಚ್ಚಿನ ಅವಕಾಶವಿದೆ.
ತನ್ನ ಬಾಹ್ಯ ಮತ್ತು ಡಿಜಿಟಲ್ ಆಸ್ತಿಯನ್ನು ಕ್ರೋಢಿಕರಿಸಿ, ಪ್ರಯಾಣಿಕರಿಂದ, ಸ್ಟೇಷನ್ ಪ್ಲಾಟ್ಫಾರಂಗಳಿಂದ, ರೆಸಿಡೆನ್ಸಿಯಲ್ ಕಾಲೋನಿಗಳಿಂದ, ಹಳಿಗಳ ಸುತ್ತಲಿನ ಜಾಗಗಳಿಂದ ರೈಲ್ವೇಗೆ ಆದಾಯ ಗಳಿಸುವ ಅವಕಾಶವಿದೆ.
ಇದೀಗ ಸುಂಕದ ಗಳಿಕೆಯನ್ನು ಹೊರತು ಪಡಿಸಿ ಇತರ ಮೂಲದಿಂದ ಹೆಚ್ಚಿನ ಆದಾಯಗಳಿಸಲು ಮುಂದಾಗಿರುವ ರೈಲ್ವೇ ಇದಕ್ಕಾಗಿ ಜನರಿಂದ ನವನಾವೀಣ್ಯ ಐಡಿಯಾಗಳನ್ನು ಸ್ವೀಕರಿಸಲು ಮುಂದಾಗಿದೆ.
ಇದಕ್ಕಾಗಿ ನ॒ಲ್ಲಿ ಆನ್ಲೈನ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸುಂಕದ ಗಳಿಕೆಯನ್ನು ಹೊರತುಪಡಿಸಿ ಇತರ ಮೂಲದಿಂದ ಹೆಚ್ಚಿನ ಆದಾಯಪಡೆಯುವ ಐಡಿಯಾಗಳನ್ನು ನೀಡುವಂತೆ ಸೂಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.