ಜಮ್ಮು: ಹಿಂದೂಗಳ ಪಾಲಿನ ಅತೀ ಪವಿತ್ರ ಯಾತ್ರೆ ಅಮರನಾಥ ಯಾತ್ರೆಗೆ ನೋಂದಾವಣೆ ಪ್ರಕ್ರಿಯೆ ಬುಧವಾರದಿಂದ ಆರಂಭಗೊಂಡಿದೆ. ಹಲವಾರು ಭಕ್ತರು ಯಾತ್ರೆ ಕೈಗೊಳ್ಳಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.
ದೇಶದ ವಿವಿಧೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಮತ್ತು YES ಬ್ಯಾಂಕ್ಗಳ 433 ಬ್ರಾಂಚ್ಗಳಲ್ಲಿ ನೋಂದಾವಣೆ ಪ್ರಕ್ರಿಯೆ ನಡೆಯುತ್ತಿದೆ.
ಹೆಲಿಕಾಫ್ಟರ್ ಮೂಲಕ ತೆರಳುವ ಯಾತ್ರಿಕರಿಗೆ ಮುಂಗಡ ನೋಂದಾವಣೆಯ ಅವಶ್ಯಕತೆ ಇರುವುದಿಲ್ಲ. 13 ವರ್ಷದ ಕೆಳಗಿನ ಮಕ್ಕಳು, 75ವರ್ಷ ಮೇಲ್ಪಟ್ಟ ವೃದ್ಧರು, 6 ವಾರಗಳಿಗೆ ಮೇಲ್ಪಟ್ಟ ಗರ್ಭಿಣಿಯರು ಈ ಬಾರಿಯ ಯಾತ್ರೆಗೆ ತೆರಳಲು ಅವಕಾಶವಿಲ್ಲ.
ಅಮರನಾಥ ದೇಗುಲ ಮಂಡಳಿಯ ವೆಬ್ಸೈಟ್ www.shriamarnathjishrine.com.ನಲ್ಲಿ ನೋಂದಾವಣೆ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಗಳನ್ನು ನೀಡಲಾಗಿದೆ. ಜೂನ್ 29ರಂದು ಬಲ್ತಲ್ ಮತ್ತು ಚಂದನ್ವರಿ ಮಾರ್ಗವಾಗಿ ಯಾತ್ರೆ ಆರಂಭವಾಗಲಿದ್ದು, ರಕ್ಷಾ ಬಂಧನದ ದಿನವಾದ ಆಗಷ್ಟ್ 7ರಂದು ಅಂತ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.