ನವದೆಹಲಿ: ರಿಲಯನ್ಸ್ ಜಿಯೋಗೆ ತೀವ್ರ ಪೈಪೋಟಿ ನೀಡುವಲ್ಲಿ ಮುಂದಾಗಿರುವ ಬಿಎಸ್ಎನ್ಎಲ್ ತನ್ನ ಪೋಸ್ಟ್ಪೇಯ್ಡ್ ಗ್ರಾಹಕರಿಗಾಗಿ ಹೊಸ ‘ದಿಲ್ ಖೋಲ್ ಕೆ ಬೋಲ್’ ಆಫರ್ ಬಿಡುಗಡೆ ಮಾಡಿದೆ.
ಈ ಆಫರ್ ಪ್ರಸ್ತುತ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಅನಿಯಮಿತ ರಾಷ್ಟ್ರೀಯ ಕರೆಗಳನ್ನು ಮಾಡಬಹುದು. ಗ್ರಾಹಕರು ಆರಂಭದಲ್ಲಿ ಮೊದಲ 4 ತಿಂಗಳಿಗೆ 599 ರೂ. ದರ ಪಾವತಿಸಬೇಕಿದ್ದು, ಅನಂತರ ಪ್ರತಿ ತಿಂಗಳು 799 ರೂ. ಪಾವತಿಸಬೇಕಿದೆ.
ಗ್ರಾಹಕರು ಮೊದಲ 4 ತಿಂಗಳು 3 ಜಿಬಿ ಡಾಟಾ ಪಡೆಯಲಿದ್ದು, ನಂತರದ ರೂ. 799 ಯೋಜನೆಯಡಿ ಉಚಿತ ವಾಯ್ಸ್ ಕಾಲ್ ಜೊತೆ ಪ್ರತಿ ತಿಂಗಳು 6 ಜಿಬಿ ಡಾಟಾ ಪಡೆಯಲಿದ್ದಾರೆ.
ಬಿಎಸ್ಎನ್ಎಲ್ ಕಳೆದ ಡಿಸೆಂಬರ್ನಲ್ಲಿ ಬಿಎಸ್ಎನ್ಎಲ್ನಿಂದ ಬಿಎಸ್ಎನ್ಎಲ್ಗೆ ರೂ. 99ರ ಅನಿಯಮಿತ ವಾಯ್ಸ್ ಕಾಲಿಂಗ್ ಆಫರ್ ಘೋಷಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.