ಭೂಪಾಲ್: ಮಧ್ಯ ಪ್ರದೇಶ ಪ್ರಸಿದ್ಧ ಕನ್ಹಾ ಟೈಗರ್ ರಿಸರ್ವ್ನಲ್ಲಿ ಪಕ್ಷಿ ಸಮೀಕ್ಷೆ-2017 ಆಯೋಜಿಸಲಾಗಿದ್ದು, ಉತ್ಸಾಹಿಗಳು ಪಾಲ್ಗೊಳ್ಳಬಹುದು.
ಬರ್ಡ್ ಕೌಂಟ್ ಇಂಡಿಯಾ ಸಹಯೋಗದಲ್ಲಿ ಮಾ.17 ರಿಂದ 20 ರವರೆಗೆ ಈ ಸಮೀಕ್ಷೆ ನಡೆಯಲಿದೆ ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಪಕ್ಷಿ ಪ್ರೇಮಿಗಳಿಗೂ ಈ ಸಮೀಕ್ಷೆಯಲ್ಲಿ ಭಾಗವಹಿಸುವ ಅವಕಾಶವಿದೆ. ಆಸಕ್ತರು ಸ್ವಯಂ ಸೇವಕರಾಗಿ ಪಾಲ್ಗೊಳ್ಳಲು ಫೆ. 28 ರೊಳಗಾಗಿ kanhabirdsurvey@gmail.com and fdkanha@rediffmail.com ಗೆ ಅರ್ಜಿ ಸಲ್ಲಿಸಬಹುದು.
ಪಕ್ಷಿ ಹಾಗೂ ಪರಿಸರ ತಜ್ಞರು ಮತ್ತು ಕನ್ಹಾ ಟೈಗರ್ ರಿಸರ್ವನ ಗೈಡ್ ಕೂಡಾ ಈ ಸಂದರ್ಭದಲ್ಲಿ ಉಪಸ್ಥಿತರಿರುವರು. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಆಸಕ್ತ ಸ್ವಯಂ ಸೇವಕರು ಕೇವಲ ಸಮೀಕ್ಷೆ ನಡೆಸಬಹುದೇ ವಿನಃ, ಪಕ್ಷಿಗಳ ಛಾಯಾಚಿತ್ರ ತೆಗೆಯುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.