ನವದೆಹಲಿ: ಜಮ್ಮು ಮತು ಕಾಶ್ಮೀರ ಕಣಿವೆ ರಾಜ್ಯದಲ್ಲಿ ಪೆಲ್ಲೆಟ್ ಗನ್, ರಕ್ಷಣಾ ಸಾಧನಗಳ ಬಳಕೆಗೆ ಸಿಆರ್ಪಿಎಫ್ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 20,000 ದೈಹಿಕ ರಕ್ಷಣಾ ಸಾಧನಗಳು, 3,000 ಪಾಲಿಕಾರ್ಬೋನೇಟ್ ಶೀಲ್ಡ್ಗಳು, ಸುಧಾರಿತ ಹೆಲ್ಮೆಟ್ಗಳು, ಟಿಯರ್-ಸ್ಮೋಕ್ ರಕ್ಷಕಗಳು, ಹೆಚ್ಚಿನ ಸಂಖ್ಯೆಯಲ್ಲಿ ಪೆಲ್ಲೆಟ್ ಗನ್ಗಳನ್ನು ಬಳಸಲು ಅದು ಮುಂದಾಗಿದೆ.
ಜಮ್ಮುವಿನಲ್ಲಿ ನಡೆದ ಗಲಭೆಯ ಸಂದರ್ಭ 7,000ಕ್ಕೂ ಹೆಚ್ಚು ನಾಗರಿಕರು ಪೆಲ್ಲೆಟ್ ಗನ್ ಬಲಕೆಯಿಂದ ಗಾಯಗೊಂಡಿದ್ದು, ಇದರಿಂದ ಪಾವಾ ಶೇಲ್ಗಳನ್ನು ಪರಿಚಯಿಸಲಾಗಿತ್ತು. ಆದರೆ ಪೆಲ್ಲೆಟ್ ಗನ್ಗೆ ಸಮಾನವಾದ ಅಥವಾ ಪರಿಣಾಮಕಾರಿ ಸಾಧನ ಕಂಡು ಹಿಡಿಯುವವರೆಗೆ ಪೆಲ್ಲೆಟ್ ಗನ್ ಹಾಗೂ ಪರ್ಯಾಯ ಸಾಧನಗಳಾದ ಪಾವಾ ಶೇಲ್ಗಳನ್ನು ಬಳಸಲಾಗುವುದು ಎಂದು ಸಿಆರ್ಪಿಎಫ್ನ ಡಿ.ಜಿ. ಕೆ. ದುರ್ಗಾಪ್ರಸಾದ್ ಹೇಳಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಕಾಶ್ಮೀರಕ್ಕೆ ಪೆಲ್ಲೆಟ್ ಗನ್ಗಳನ್ನು ರವಾನಿಸಲಾಗಿದೆ. ಇದು ಪ್ರಸ್ತುತ ಅಲ್ಲಿಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಹಾಗೂ ಗುಪ್ತಚರ ಇಲಾಖೆಗಳ ಮೌಲ್ಯಮಾಪನ, ಅಶಾಂತಿಯ ಕಾರಣಗಳಿಂದ ನಿರ್ಧರಿಸಲಾಗಿದೆ ಎಂದು ಸಿಆರ್ಪಿಎಫ್ನ ಶಸ್ತ್ರಾಸ್ತ್ರ ಸಂಗ್ರಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.