ನವದೆಹಲಿ: ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುವವರ ಸಂಖ್ಯೆ ಭಾರತದಲ್ಲಿ ಹೆಚ್ಚುತ್ತಿದೆ ಎಂದು ಡಬ್ಲ್ಯುಎಚ್ಒ (ವರ್ಲ್ಡ್ ಹೆಲ್ತ್ ಆರ್ಗನೈಸೇಶನ್) ಎಚ್ಚರಿಸಿದ್ದು, 5 ಕೋಟಿಗೂ ಹೆಚ್ಚು ಜನ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.
ಜಾಗತಿಕ ಆತ್ಮಹತ್ಯೆ ಪ್ರಕರಣಗಳಲ್ಲಿ ಭಾರತದ್ದೇ ಬಹುಪಾಲಿದ್ದು, ಇನ್ನುಳಿದಂತೆ ಮಧ್ಯಮ ಹಾಗೂ ಕಡಿಮೆ ಆದಾಯವುಳ್ಳ ದೇಶಗಳ ಪಾಲಿದೆ. ಡಬ್ಲ್ಯುಎಚ್ಒ ನೂತನ ವರದಿ ಅನ್ವಯ 322 ಮಿಲಿಯನ್ ಜನರು ಜಗತ್ತಿನಲ್ಲಿ ಮಾನಸಿಕ ಖಿನ್ನತೆಯ ಸಮಸ್ಯೆ ಸುಳಿಗೆ ಸಿಲುಕಿದ್ದು, ಇದರ ಅರ್ಧಕ್ಕರ್ಧದಷ್ಟು ಜನ ಪೂರ್ವ ಏಷಿಯಾ ಹಾಗೂ ಪಾಶ್ಚಿಮಾತ್ಯ ಫೆಸಿಪಿಕ್ ಪ್ರದೇಶದಲ್ಲಿದ್ದಾರೆ. ಇದರ ಪರಿಣಾಮ ಭಾರತದಲ್ಲೂ ಹೆಚ್ಚಾಗಿದೆಯಂತೆ.
ಡಬ್ಲ್ಯು ಎಚ್ಒ ಸಂಸ್ಥೆಯ ದಾಖಲೆಯೇ ಹೇಳುವಂತೆ 2015 ರಲ್ಲಿ 5 ಕೋಟಿಗಿಂತಲೂ ಹೆಚ್ಚು ಜನ ಭಾರತದಲ್ಲಿ ಮಾನಸಿಕ ಖಿನ್ನತೆ ಹಾಗೂ 3 ಕೋಟಿಗೂ ಹೆಚ್ಚು ಜನ ಆತಂಕದ ಸಮಸ್ಯೆಯಿಂದ ನರಳುತ್ತಿದ್ದರು.
2005 ರಿಂದ 2015 ರ ಅವಧಿಯಲ್ಲಿ ಮಾನಸಿಕ ಕಾಯಿಲೆಯಿಂದ ಬಳಲುವರರ ಸಂಖ್ಯೆ ಅಂದಾಜು ಶೇ. 18.4 ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ. ಡಬ್ಲ್ಯು ಎಚ್ಒ ಅಂಕಿ ಸಂಖ್ಯೆಯ ಅನ್ವಯ 2015 ರಲ್ಲಿ 5,66,75,969 (ಒಟ್ಟು ಜನಸಂಖ್ಯೆಯ ಶೇ.4.5) ಜನ ಮಾನಸಿಕ ಖಿನ್ನತೆ ಹಾಗೂ 3,84,250,92 (ಒಟ್ಟು ಜನಸಂಖ್ಯೆಯ ಶೇ.3) ರಷ್ಟು ಜನ ಮಾನಸಿಕ ಆತಂಕದಿಂದ ಬಳಸಲುತ್ತಿದ್ದರು ಎನ್ನಲಾಗಿದೆ.
‘Depression and Other Common Mental Disorders – Global Health Estimates’ ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಸಿದ್ಧಪಡಿಸಲಾಗಿದೆ. 2014 ರ ಡಬ್ಲ್ಯುಎಚ್ಒ ವರದಿ ಅನ್ವಯ ೨೦೧೨ ರಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲಿ ಘಟಿಸಿದ್ದವು.
ಕೇವಲ ಭಾರತದಲ್ಲಿ ಮಾತ್ರವಲ್ಲದೇ, ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳಲ್ಲಿಯೂ ಈ ಸಮಸ್ಯೆಯಿಂದ ಬಳಲುವವರು ಇದ್ದಾರೆ. ಅಲ್ಲದೇ ಈ ಕಾಯಿಲೆಗಳಿಗೆ ಮಹಿಳೆಯರು ಹಾಗೂ ಪುರುಷರು ಎಂಬ ವ್ಯತ್ಯಾಸವಿಲ್ಲ. ಎಲ್ಲರಲ್ಲೂ ಈ ರೀತಿಯ ಮಾನಸಿಕ ಸಮಸ್ಯೆಗಳನ್ನು ನಾವು ಕಾಣಬಹುದು ಎನ್ನಲಾಗಿದೆ.
ನಮ್ಮ ದಿನನಿತ್ಯದ ಬದುಕಿನ ಶೈಲಿಯೇ ಬದಲಾಗಿದೆ. ಸೇವಿಸುವ ಆಹಾರ, ಉದ್ಯೋಗ, ಉಡುಗೆ, ತೊಡುಗೆ, ಬದುಕಿನ ರೀತಿ, ನೀತಿಗಳಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯತ್ಯಾಸವಾಗಿದೆ. ಜಾಗತಿಕ, ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ, ಆವಿಷ್ಕಾರಗಳ ಹಿಂದೆ ಓಡುತ್ತಿರುವ ಬದುಕಲ್ಲಿ ಮಾನಸಿಕ ಒತ್ತಡ, ಖಿನ್ನತೆ ಆತಂಕಗಳು ಎಗ್ಗಿಲ್ಲದೇ ಕಾಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.