ವಡೋದರಾ: ಬೆಂಕಿಯ ಅನೇಕ ಉಪಯೋಗವನ್ನು ನಾವು ತಿಳಿದಿದ್ದೇವೆ. ಆದರೆ ಬೆಂಕಿಯನ್ನು ಕಲೆಗೂ ಉಪಯೋಗಿಸಬಹುದು ಎಂಬುದಕ್ಕೆ ಗುಜರಾತ್ನ ಕಲಾವಿದ ಕಮಲ್ ರಾಣಾ ಸಾಕ್ಷಿಯಾಗಿದ್ದಾರೆ.
ಗುಜರಾತ್ನ ವಡೋದರಾದಲ್ಲಿರುವ ಕಮಲ್ ರಾಣಾ ಅವರು ರಚಿಸಿರುವ ಚಿತ್ರ ಜಗತ್ತಿನ ಅತಿ ಉದ್ದದ ಚಿತ್ರ ಎಂಬ ಹಿರಿಮೆಗೂ ಪಾತ್ರವಾಗಿದೆ. ಸಾಮಾನ್ಯವಾಗಿ ಎಲ್ಲರೂ ಚಿತ್ರ ಬಿಡಿಸಲು ಬ್ರಷ್ ಉಪಯೋಗಿಸುತ್ತಾರೆ. ಆದರೆ ರಾಣಾ ಅವರು ಬೆಂಕಿಯನ್ನು ಬಳಸುತ್ತಾರೆ. ಬೆಂಕಿಯ ಕಡ್ಡಿ, ಬೆಂಕಿಯುಗುಳುವ ರಾಸಾಯನಿಕ ಪದಾರ್ಥ ಹಾಗೂ ಪೌಡರ್ ಬಳಸುತ್ತಾರೆ.
ಚಿತ್ರವು 63 ಅಡಿ ಉದ್ದ ಹಾಗೂ 7 ಅಡಿ ಅಗಲವಿದೆ. ಜಗತ್ತಿನ ಅತಿ ಪ್ರಖ್ಯಾತ ಕ್ರಿಕೆಟರ್ಸ್ನ್ನು ಬಿಡಿಸಲಾಗಿದೆ. ಈ ಚಿತ್ರವನ್ನು ರಾಣಾ ಅವರು ಕ್ರಿಕೆಟ್ ಜಗತ್ತಿಗೆ ಸಮರ್ಪಿಸಿದ್ದಾರೆ. ಇದನ್ನು ಕ್ರಿಕೆಟ್ ಮೈದಾನದಲ್ಲಿ ಪ್ರದರ್ಶಿಸಿದರೆ ಉತ್ತಮ ಎಂದು ಅವರು ಆಶಿಸಿದ್ದಾರೆ.
ಇದು ನೋಡುಗರ ಗಮನ ಸೆಳೆಯುತ್ತಿದೆ. ಬೆಂಕಿಯಲ್ಲಿ ಅರಳಿಸುವ ಕಲೆ ಕುರಿತು ರಾಣಾ ಅವರು ಪ್ರಾತ್ಯಕ್ಷಿಕೆಯನ್ನೂ ನೀಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.